ಹೊನ್ನಾವರ: ತಾಲೂಕಿನ ಕಾಸರಕೋಡ್ ಜನತಾ ವಿದ್ಯಾನಿಲಯದ ರಸ್ತೆ ಕೇವಲ ಒಂದೇ ವರ್ಷಕ್ಕೆ ದುರಸ್ಥಿಗೆ ತಲುಪಿರುವ ಜೊತೆಗೆ ಕಳಪೆ ಕಾಮಗಾರಿ ನಡೆದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕಳೆದ ಒಂದುವರೆ ವರ್ಷದ ಹಿಂದೆ 600 ಮೀ ಸಿ.ಸಿ ರಸ್ತೆಯಾಗಿದೆ. ವರ್ಷ ಕಳೆಯೊದರಲ್ಲಿ ರಸ್ತೆ ಹೊಂಡ ಬಿದ್ದಿತ್ತು. ಹೊಂಡಕ್ಕೆ ಪ್ಯಾಚ್ ವರ್ಕ ನಡೆಸಿದ್ದಾರೆ. ತೆಪೆ ಹಚ್ಚುವ ಕಾರ್ಯವು ಕಳಪೆ ಎನ್ನುವ ಆರೋಪ ಕೇಳಿ ಬಂದಿದೆ. ಸಂಬಂಧಪಟ್ಟವರು ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಶಾಸಕರು ಅನುದಾನ ಮಂಂಜೂರಿ ಮಾಡುತ್ತಾರೆ. ಆದರೆ ಇಂತಹ ಕಳಪೆ ಕಾಮಗಾರಿಯಿಂದ ಶಾಸಕರ ಹೆಸರಿಗು ಕಪ್ಪುಚುಕ್ಕೆ ತರುವಂತಾಗುತ್ತದೆ
ಕೇವಲ ಹೆಸರಿಗೆ ಮಾತ್ರ ರಸ್ತೆ,ನೀರಾವರಿ ಯೋಜನೆ ಇತ್ಯಾದಿ ಅಭಿವೃದ್ಧಿ ಎನ್ನುವಂತಾಗುತ್ತದೆ ಆದರೆ ಕಾಮಗಾರಿಗಳೆಲ್ಲ ಕೊಳಕಾಗಿರುತ್ತದೆ.
ಮುಂದೆಯು ಹಲವಾರು ಕಾಮಗಾರಿ ಮಂಜೂರಿಯಾಗುವ ಹಂತದಲ್ಲಿದೆ. ಅದು ಸಹ ಸಮರ್ಪಕವಾಗಬೇಕು. ನಾವು ಕೂಲಿ,ನಾಲಿ ಮಾಡುವ ಬದುಕುವವರು. ಕಳಪೆಯಾದರೆ ರಸ್ತೆಗಾಗಿ ದಿನನಿತ್ಯ ಹೋರಾಡುವುದೆ ನಮ್ಮ ಕೆಲಸವಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ದೇವಾಲಯ,ಶಾಲೆ, ಬ್ಯಾಂಕ್ , ಪೋಸ್ಟ್ ಆಫಿಸ್ ಇದೆ. ಕಳೆದ ಆರು ತಿಂಗಳಿಂದ ರಸ್ತೆ ಹೊಂಡ ಬಿದ್ದಿದೆ. ಐದು ವರ್ಷದ ಅವಧಿಯ ರಸ್ತೆ ವರ್ಷ ಕಳೆಯೊದರಲ್ಲಿ ಈ ತರಹ ದುಸ್ಥಿಗೆ ತಲುಪಿದರೆ ಕಾಮಗಾರಿಯ ಗುಣಮಟ್ಟ ಎನೆಂಬುದು ತಿಳಿಯುತ್ತದೆ.ಈ ಮೊದಲು ಸಹ ಈ ರಸ್ತೆ ಕಳಪೆಯಾಗಿರುವ ಬಗ್ಗೆ ಪ್ರತಿಭಟನೆ ನಡೆದಿತ್ತು. ಕಳಪೆ ಕಾಮಗಾರಿ ನಡೆಸುವ ಗುತ್ತಿಗೆದಾರರ ವಿರುದ್ದ ಕಠಿಣ ಕ್ರಮ ಆಗಬೇಕು. ಇದು ಇತರರಿಗೂ ಪಾಠವಾಗಬೇಕು. ಮುಂದಿನ ದಿನಗಳಲ್ಲಿ ಇದೇ ತರಹ ಕಾಮಗಾರಿ ನಡೆದರೆ ಪ್ರತಿಭಟಿಸುವುದಾಗಿ ಕರವೇ ಅಧ್ಯಕ್ಷ ಮಂಜುನಾಥ ಗೌಡ ಸೇರಿದಂತೆ ಸಾರ್ವಜನಿಕರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಕಾಸರಕೋಡ್ ಗ್ರಾಮ ಪಂಚಾಯತ್ ಸದಸ್ಯ ಜೂವಾವ್ ರೋಡ್ರಗೀಸ್, ಸುರೇಶ್ ತೇಲಂಗ್, ಹರೀಶ್ ಗೌಡ, ಮಹೇಶ ಗೌಡ, ಗಣೇಶ ಗೌಡ ಮತ್ತಿತರರು ಹಾಜರಿದ್ದರು.