ಭಟ್ಕಳ: ಜಾಲಿ ಪಟ್ಟಣ ಪಂಚಾಯತದಲ್ಲಿ ಸುಳ್ಳು ಮರಣ ದಾಖಲೆ ಪ್ರಕರಣದ ಪ್ರಮುಖ ಆರೋಪಿಯಾದ ಮೈಸೂರಿನ ಹೆಚ್.ವಿ. ಹರ್ಷವರ್ಧನ್ ನ್ನು ಭಟ್ಕಳ ಪೊಲೀಸರು ಬಾಡಿ ವಾರಂಟ ಮೇಲೆ ಮೈಸೂರಿನಿಂದ ಭಟ್ಕಳಕ್ಕೆ ಕರೆತಂದು ಭಟ್ಕಳದ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಫೆ. 5 ರವರೆಗೆ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದರು.
ಆರೋಪಿಯ ವಿರುದ್ದ ಐಪಿಸಿ 465, 468 471 ಆರ್.ಡ್ಲು 120 (ಬಿ) ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸಲು ನ್ಯಾಯಾಲಯವು ಅನುಮತಿ ನೀಡಿದೆ. ಜಾಲಿ ಪಟ್ಟಣ ಪಂಚಾಯತನಲ್ಲಿ ನಡೆದ ಸುಳ್ಳು ಮರಣ ದಾಖಲೆ ಪ್ರಕರಣವನ್ನು ಭಟ್ಕಳ ಪೊಲೀಸರು ಗಂಭೀರವಾಗಿ ತೆಗೆದುಕೊಂಡು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಜಾಲಿ ಪಟ್ಟಣ ಪಂಚಾಯತದಲ್ಲಿ ಅಧಿಕಾರಿಗಳೊಂದಿಗೆ ಪಂಚಾಯತ ಸದಸ್ಯರೂ ಈ ದಂದೆಯಲ್ಲಿ ಶಾಮೀಲಾಗಿರುವ ಸಂಶಯ ಸಾರ್ವಜನಿಕರ ವಲಯದಲ್ಲಿ ವ್ಯಕ್ತವಾಗಿದ್ದು, ಭಟ್ಕಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.