ಭಟ್ಕಳ: ತಾಲೂಕಿನಲ್ಲಿ ವಿವಿಧ ಅಭಿವೃದ್ದಿ ಕಾರ್ಯಗಳಿಗೆ ಶಾಸಕ ಸುನೀಲ್ ನಾಯ್ಕ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ತಾಲೂಕಿನ ಹಲವು ಗ್ರಾಮಗಳಲ್ಲಿ ಗ್ರಾಮೀಣ ಭಾಗದ ರಸ್ತೆಗಳಿಗೆ ಸರಕಾರದಿಂದ ಅನುದಾನ ದೊರೆತಿದ್ದು,ಈ ನಿಟ್ಟಿನಲ್ಲಿ ಇಂದು ಹಲವು ಗ್ರಾಮೀಣ ಪ್ರದೇಶದಲ್ಲಿ ರಸ್ತೆಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ್ದೇನೆ ಎಂದರಲ್ಲದೇ ನಮ್ಮ ಮುಂದೆಯೂ ಸಹ ಸರಕಾರದಿಂದ ನೆರವು ಪಡೆದು ತಾಲೂಕಿನ ಅಬಿವೃದ್ದಿಯನ್ನು ಮಾಡಲು ಕಂಕಣ ಭದ್ದನಾಗಿದ್ದೇನೆ ಎಂದರು.
ತಾಲೂಕಿನ ಮಾವಳ್ಳಿ 2 ಪೆಟ್ರೋಲ್ ಬಂಕ್ ಬಳಿ ರಸ್ತೆ ನಿರ್ಮಾಣಕ್ಕೆ 15 ಲಕ್ಷ, ಮಾವಳ್ಳಿ 2 ಗುಮ್ಮನಹಕ್ಲುನಲ್ಲಿ 10 ಲಕ್ಷ್ ರೂ ರಸ್ತೆ ನಿಮಾಣ, ಕಾಯ್ಕಿಣಿ ಪಂಚಾಯತ ಸಮೀಪದ ದುರ್ಗಾಂಬ ದೇವಸ್ತಾನದ ರಸ್ತೆ ನಿರ್ಮಾಣಕ್ಕೆ 15 ಲಕ್ಷ್ ರೂ. ಮಾವಳ್ಳಿ -1 ಕೋನಾರಕೇರಿ ಹಡಾಳ ರಸ್ತೆ ನಿರ್ಮಾಣಕ್ಕೆ 20 ಲಕ್ಷ ರೂ. ಮಾವಳ್ಳಿ-2 ಹಡಾಳ ಗೊಂಡರಕೇರಿ ರಸ್ತೆ ನಿರ್ಮಾಣಕ್ಕೆ 25 ಲಕ್ಷ ರೂ. ಕಾಯ್ಕಿಣಿ ಪಂಚಾಯತ ಕೋಡದಮಕ್ಕಿ ರಸ್ತೆ ನಿರ್ಮಾಣಕ್ಕೆ 10 ಲಕ್ಷ ರೂ. ಒಟ್ಟೂ 1ಕೋಟಿ 5 ಲಕ್ಷ ರೂ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಶಾಸಕರನ್ನು ಗ್ರಾಮಸ್ಥರು ಗೌರವಿಸಿ ಸನ್ಮಾನಿಸಿದರು.