ಯಲ್ಲಾಪುರ: ಹುಮ್ನಾಬಾದ್ ತಹಸೀಲ್ದಾರರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಘಟಕದ ವತಿಯಿಂದ ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಹುಮನಾಬಾದ ತಹಸೀಲ್ದಾರ್ ಪ್ರದೀಪ ಹಿರೇಮಠ ಅವರ ಮೇಲೆ ಹಲ್ಲೆ ನಡೆಇದವರ ಮೇಲೆ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದರು. ಈ ವೇಳೆ ಮಾತನಾಡಿದ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಕಾಶ ನಾಯಕ, ಸರ್ಕಾರಿ ನೌಕರರಿಗೆ ಸೂಕ್ತ ಭದ್ರತೆ ನೀಡದಿದ್ಧರೆ,ಸಾರ್ವಜನಿಕ ಕೆಲಸ ಮಾಡುವದು ಕಷ್ಟ. ಆದ್ದರಿಂದ ನೌಕರರಿಗೆ ಆಂತರಿಕ ಮತ್ತು ಬಾಹ್ಯ ರಕ್ಷಣೆ ನೀಡಲು ಆಗ್ರಹಿಸಿದರು.
ಸಂಘದ ಗೌರವಾಧ್ಯಕ್ಷ ಜಿ. ಎಂ. ಭಟ್ಟ, ತಾ.ಪಂ. ಕಾರ್ಯನಿರ್ವಾಹಕ ಜಗದೀಶ ಕಮ್ಮಾರ, ಪ್ರಮುಖರಾದ ವಿ. ಎಸ್. ಭಟ್ಟ ತೇಲಂಗಾರ, ನಾಗರತ್ನ ನಾಯಕ, ಸುಧಾಕರ ಜಿ.ನಾಯಕ, ನಾಗೇಶ ಮಲಮೇತ್ರಿ, ನಾರಾಯಣ ಆರ್. ನಾಯಕ, ರಾಜ್ಯ ಪರಿಷತ್ ಸದಸ್ಯ ಸಂಜೀವ ಹೊಸ್ಕೇರಿ, ತಾ.ಪಂ ವ್ಯವಸ್ಥಾಪಕ ಗಂಗಾಧರ ಭಟ್ಟ, ಪಿಡಿಒ ಮಂಜುನಾಥ ಅಂಕದ,ಶರಣಪ್ಪ ಗೋಜನೂರು ಇತರರಿದ್ದರು.