ಯಲ್ಲಾಪುರ: ರಾಯಚೂರಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಲ್ಲಿನ ಜಿಲ್ಲಾ ನ್ಯಾಯಾಧೀಶರು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ತೆಗೆದು ಅವಮಾನಗೊಳಿಸಿರುವುದನ್ನು ಖಂಡಿಸಿ ಪಟ್ಟಣದಲ್ಲಿ ಅಂಬೇಡ್ಕರ್ ಸೇವಾ ಸಂಘದವರು ತಹಸೀಲ್ದಾರ ಶ್ರೀಕೃಷ್ಣ ಕಾಮ್ಕರ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಅಂಬೇಡ್ಕರ್ ಸರ್ಕಲ್ ದಿಂದ ತಹಸೀಲ್ದಾರ ಕಚೇರಿಯವರೆಗೆ ಮೆರವಣಿಗೆ ನಡೆಸಿ, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅನುಚಿತ ವರ್ತನೆ ತೋರಿರುವುದರಿಂದ ಅವರನ್ನು ನ್ಯಾಯಾಧೀಶ ಹುದ್ದೆಯಿಂದ ವಜಾಮಾಡಬೇಕೆಂದು ಆಗ್ರಹಿಸಿದರು.
ಅಂಬೇಡ್ಕರ್ ಸೇವಾ ಸಂಘದ ಅಧ್ಯಕ್ಷ ಜಗನ್ನಾಥ ರೇವಣಕರ್, ಪ.ಪಂ ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್, ಪ್ರಮುಖರಾದ ಮಾರುತಿ ಬೊವಿವಡ್ಡರ್, ದ್ಯಾಮಣ್ಣ ಬೋವಿವಡ್ಡರ್, ಅನಿಲ್ ಮರಾಠೆ, ನಾಗೇಶ ಬೋವಿವಡ್ಡರ್, ಕಲ್ಲಪ್ಪ ಹೋಳಿ, ರವೀಂದ್ತ ಪಾಟಣಕರ್, ಜನಾರ್ಧನ ಪಾಟಣಕರ್, ಶಿವಯೋಗಿ ಕಾಂಬಳೆ, ಪೂಜಾ ನೇತ್ರೇಕರ್, ಹನುಮಂತ ಕೊರವರ, ಸಂತೋಷ ಪಾಟಣಕರ್, ಸಂತೋಷ ನಾಯ್ಕ, ಶಿವಾನಂದ ಖಾನಾಪುರ ಇತರರಿದ್ದರು.