ಯಲ್ಲಾಪುರ: ಪ.ಪಂ ಸಭಾಭವನದಲ್ಲಿ ಪ.ಪಂ ಅಧ್ಯಕ್ಷೆ ಸುನಂದಾ ದಾಸ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಯಾವುದೇ ಗಂಭೀರ ಚರ್ಚೆ ಇಲ್ಲದೇ ವಿವಿಧ ವಿಷಯಗಳಿಗೆ ಅನುಮೋದನೆ ನೀಡಲಾಯಿತು.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅವರು ಉಚಿತವಾಗಿ ಶವ ಸಂಸ್ಕಾರ ವಾಹನವನ್ನು ಪಟ್ಟಣ ಪಂಚಾಯಿತಿಗೆ ನೀಡಿದ್ದು, ಅದರ ಸೇವೆಯನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಲು ನಿರ್ಧರಿಸಲಾಯಿತು. ಪಟ್ಟಣದ ವಿವಿಧೆಡೆ ಪ್ರಮುಖ ಸ್ಥಳಗಳಲ್ಲಿ ಜಾಹಿರಾತು ಫಲಕ ಅಳವಡಿಸಲು ಸ್ಥಳ ನಿಗದಿ ಪಡಿಸಲಾಯಿತು.
ಸ್ಥಾಯಿ ಸಮಿತಿಯಡಿಯಲ್ಲಿ ಮಂಜೂರಾದ ವಿವಿಧ ಕಾಮಗಾರಿಗೆ ಅನುಮೋದನೆ ನೀಡಲಾಯಿತು. ತರಕಾರಿ ಮಾರುಕಟ್ಟೆಯ ವಾರದ ಸಂತೆಯ ಫೀ ವಸೂಲಿಗೆ ಟೆಂಡರ್ ಕರೆಯುವ ಕುರಿತು ಚರ್ಚಿಸಲಾಯಿತು.
ಉಪಾಧ್ಯಕ್ಷೆ ಶ್ಯಾಮಲಿ ಪಾಟಣಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಅಮಿತ್ ಅಂಗಡಿ, ಮುಖ್ಯಾಧಿಕಾರಿ ಸಂಗನಬಸಯ್ಯ, ಸದಸ್ಯರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.