ಕುಮಟಾ: ಕರ್ನಾಟಕ ಸರ್ಕಾರ ದ ಪಶುಸಂಗೋಪನ ಸಚಿವ ಪ್ರಭು ಚೌಹ್ಹಾಣ್ ಗೋಕರ್ಣದ ಅಶೋಕೆಯ ರಾಮಚಂದ್ರಾಪುರ ಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದರು.
ಸ್ಥಳೀಯ ಶಾಸಕ ದಿನಕರ ಶೆಟ್ಟಿಯವರು ಗೋಕರ್ಣಕ್ಕೆ ತೆರಳಿ ಸಚಿವ ಚೌಹ್ಹಾಣ್ ರವರನ್ನು ಭೇಟಿ ಆಗಿ ನಂತರ ಸಚೀವರ ಜೊತೆಗೂಡಿ ಮಠಕ್ಕೆ ತೆರಳಿ ಶ್ರೀಗಳನ್ನು ಭೇಟಿ ಮಾಡಿಸಿದರು. ಸಚೀವರ ಹಾಗೂ ಶಾಸಕರು ಶ್ರೀಗಳಿಗೆ ಶಾಲು ಹೊದೆಸಿ ಆಶೀರ್ವಾದ ಪಡೆದರು.
ನಂತರ ಮಾತನಾಡಿದ ಸಚೀವರು ಈಗಾಗಲೇ ನಾಲ್ಕು ನೂರು ಪಶು ವೈದ್ಯ ರನ್ನು ನಮ್ಮ ಸರ್ಕಾರ ನೇಮಕ ಮಾಡಲು ತೀರ್ಮಾನಿಸಿದೆ. ಶಾಸಕರು ಹಾಗೂ ತಾ ಪಂ ಸದಸ್ಯ ಮಹೇಶ ಶೆಟ್ಟಿ ಯವರು ಗೋಕರ್ಣಕ್ಕೆ ಪಶು ವೈದ್ಯರನ್ನು ನೇಮಿಸುವಂತೆ ಮನವಿ ನೀಡಿದ್ದಾರೆ ಅದರಂತೆ ಕುಮಟಾ ಕ್ಷೇತ್ರದ ಗೋಕರ್ಣ ಕ್ಕೂ ಕೂಡ ಶೀಘ್ರದಲ್ಲೇ ಪಶು ವೈದ್ಯ ರನ್ನು ನೇಮಿಸಲಾಗುವುದು ಹಾಗೂ ಪಶುಗಳ ಆರೈಕೆಗಾಗಿ ಒಂದು ಅಂಬುಲೆನ್ಸ್ ಕೂಡ ಈ ಕ್ಷೇತ್ರ ಕ್ಕೆ ನೀಡಲಾಗುವುದು ಎಂದರು.
ಮಠದ ವ್ಯವಸ್ಥೆ ಹಾಗೂ ನೂತನವಾಗಿ ನಿರ್ಮಿಸಿರುವ ವಿಷ್ಣುಗುಪ್ತ ವಿದ್ಯಾಪೀಠ ವನ್ನು ನೋಡಿ ಸಚೀವರು ಬೆರಗಾದರು. ಹಾಗೂ ಶ್ರೀಗಳ ಗೋವಿನ ಬಗ್ಗೆ ಇರುವಂಥ ಮಮತೆ ಕಳಕಳಿ ಗೋ ಸಂರಕ್ಷಣೆ ಯ ಅಭಿಯಾನ ಇವೆಲ್ಲವೂ ಕೂಡ ನಾವೆಲ್ಲರೂ ರೂಢಿಸಿಕೊಂಡು ತಾಯಿ ಸಮಾನ ಗೋವಿನ ರಕ್ಷಣೆ ಗೆ ಮುಂದಾಗೋಣ ಎಂದರು.
ಶಾಸಕ ದಿನಕರ ಶೆಟ್ಟಿಯವರು ಪಶು ವೈದ್ಯ ರನ್ನು ಶೀಘ್ರವೇ ನೇಮಿಸುವ ಕ್ರಮ ಕೈಗೊಳ್ಳುವ ನಿರ್ಧಾರ ತೆಗೆದುಕೊಂಡ ಸಚೀವರನ್ನು ಅಭಿನಂದಿಸಿ ಶೀಘ್ರವೇ ಗೋಕರ್ಣ ದ ಪಶು ಆಸ್ಪತ್ರೆ ಯ ಕಟ್ಟಡ ಉದ್ಘಾಟನೆ ಗೂ ಬರುವಂತೆ ಮನವಿ ಮಾಡಿದರು.
ತಾ ಪಂ ನಿಕಟಪೂರ್ವ ಸದಸ್ಯ ಮಹೇಶ ಶೆಟ್ಟಿ ಶನಿವಾರ ರಾತ್ರಿ ಗೋಕರ್ಣಕ್ಕೆ ಆಗಮಿಸಿದ ಸಚೀವರನ್ನು ಸ್ವಾಗತಿಸಿ ಎಲ್ಲ ವ್ಯವಸ್ಥೆ ನೋಡಿಕೊಂಡರು.
ನಿಕಟಪೂರ್ವ ತಾ ಪಂ ಸದಸ್ಯ ಮಹೇಶ ಶೆಟ್ಟಿ, ಗ್ರಾ ಪಂ ಸದಸ್ಯ ಸುಜಯ್ ಶೆಟ್ಟಿ, ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಚಂದ್ರಕಾಂತ ನಾಯ್ಕ, ತೊರ್ಕೆ ಗ್ರಾ ಪಂ ಅಧ್ಯಕ್ಷ ಆನಂದು ಕವರಿ, ಮಹೇಶ ನಾಯ್ಕ ಗಣೇಶ ಪಂಡಿತ ಹಾಗೂ ಇತರ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.