• Slide
  Slide
  Slide
  previous arrow
  next arrow
 • ದೈಹಿಕ ಶಿಕ್ಷಕ ಅನಂತ ಭಟ್’ಗೆ ಬೀಳ್ಕೊಡುಗೆ

  300x250 AD

  ಶಿರಸಿ: ಇಲ್ಲಿನ ಗಣೇಶ ನಗರದ ಸ.ಹಿ,ಪ್ರಾ ಶಾಲೆ ಆಝಾದ್ ನಗರದ ಮುಖ್ಯಾಧ್ಯಾಪಕರಾಗಿ ಇಂದು ಸೇವಾ ನಿವೃತ್ತಿಗೊಂಡ ದೈಹಿಕ ಶಿಕ್ಷಕ ಅನಂತ ರಾಮಕೃಷ್ಣ ಭಟ್ಟ ಧೋರಣಗಿರಿ ಇವರಿಗೆ ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.

  ಶಾಲಾ ಆಡಳಿತ ಸಮಿತಿ ಎಸ್.ಡಿ.ಎಂಸಿ ಯ ಅಧ್ಯಕ್ಷ ಪ್ರಕಾಶ ನಾಯ್ಕ, ಉಪಾಧ್ಯಕ್ಷೆ ಗೀತಾ ಆಚಾರಿ, ಮಾಜಿ ಅಧ್ಯಕ್ಷ ದೇವೇಂದ್ರ ಭೋವಿ ವಡ್ಡರ್ ಮುಂತಾದವರು ನಿವೃತ್ತ ಶಿಕ್ಷಕರ ವಿವಿಧ ದೈನಂದಿನ ಕಾರ್ಯಚಟುವಟಿಕೆ ಹಾಗೂ ವಿದ್ಯಾರ್ಥಿಗಳನ್ನು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ ಅವರ ಪ್ರತಿಭೆಗೆ ಕೊಡುತ್ತಿದ್ದ ಪ್ರೋತ್ಸಾಹದ ಕುರಿತು ವಿಶ್ಲೇಷಿಸಿ ಶಾಲು ಹೊದೆಸಿ ಫಲತಾಂಬೂಲ ಸಮ್ಮಾನ ಪತ್ರದೊಂದಿಗೆ ಗೌರವಿಸಲಾಯಿತು. ಇದೇ ಸಂದರ್ಬದಲ್ಲಿ ಗಣೇಶನಗರದ ಸುತ್ತಮುತ್ತಲ ನಾಗರಿಕರು ಹಾಗೂ ಶಿರಸಿ ಶಿಕ್ಷಣ ಇಲಾಖೆಯ ಬಿ.ಇ.ಓ ಕಾರ್ಯಾಲಯ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶಿರಸಿ ಇವರು ಕೂಡಾ ಶಿಕ್ಷಕ ಅನಂತ ರಾಮಕೃಷ್ಣ ಭಟ್ಟರವರ ಕಾರ್ಯ ಚಟುವಟಿಕೆಯನ್ನು ಶ್ಲಾಘಿಸಿ ಗೌರವಿಸಿದರು.

  ಅನಂತ ಭಟ್ಟರವರು ಕೇವಲ ದೈಹಿಕ ಶಿಕ್ಷಕರಾಗಿ ಕೆಲಸ ನಿರ್ವಹಿಸದೇ ವಿದ್ಯಾರ್ಥಿಗಳಲ್ಲಿ ಶಿಸ್ತು,ದೇಶ ಪ್ರೇಮ,ತೋಟಗಾರಿಕೆ ಹಾಗೂ ಗಾರ್ಡನ್ಗಳಕುರಿತಾಗಿ ಮಾರ್ಗದರ್ಶನ ಮಾಡುತ್ತ ಆಸಕ್ತಿ ಮೂಡಿಸುವ ಹಾಗೆ ಮಾಡುತ್ತಿದ್ದುದು ಇಲ್ಲಿ ಉಲ್ಲೇಖನೀಯವಾಗಿದೆ.
  ಕಳೆದ 28 ವರ್ಷಗಳಕಾಲ ದೈಹಿಕ ಶಿಕ್ಷಕರಾದರು ಕಳೆದ ವರ್ಷದಿಂದ ಶಾಲೆಯ ಮುಖ್ಯಾಧ್ಯಾಪಕರಾಗಿ ಸೇವೆ ನಿರ್ವಹಿಸುತ್ತಿದ್ದು ತಮ್ಮ ಸೇವಾವಧಿಯಲ್ಲಿ ಸ್ವಚ್ಛ ಶಾಲೆ ಪ್ರಶಸ್ತಿಯಂತಹ ಅನೇಕ ಗೌರವ ಸನ್ಮಾನಗಳಿಗೆ ಪಾತ್ರರಾಗಿದ್ದರು.

  300x250 AD

  ಸನ್ಮಾನ ಸ್ವಿಕರಿಸಿದ ಅನಂತರವರು ತಮ್ಮ ಸೇವಾಹಂತದಲ್ಲಿ ಸಹಾಯ ಸಹಕಾರ ಮಾರ್ಗದರ್ಶನ ಮಾಡಿದವರನ್ನು ನೆನೆಸುತ್ತ ಗೌರವಕ್ಕೆ ಕೃತಜ್ಞತೆ ತಿಳಿಸಿದರು.

  ವಿದ್ಯಾರ್ಥಿಗಳಾದ ವೇದಿಕಾ ಸಂಗಡಿಗರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು ಪ್ರಸ್ತುತ ಮುಖ್ಯಾಧ್ಯಾಪಕ ಡಿ ಆರ್. ನಾಯ್ಕ ಸ್ವಾಗತಿಸಿದರೆ ಶಿಕ್ಷಕಿ ಶ್ರೀಮತಿ ಹೆಗಡೆ ನಿರೂಪಿಸಿದರು. ಶಿಕ್ಷಕ ಸತೀಶ ನಾಯ್ಕ್ ವಂದಿಸಿದರು

  Share This
  300x250 AD
  300x250 AD
  300x250 AD
  Leaderboard Ad
  Back to top