ಶಿರಸಿ: ಪಾಲಕರು ತಮ್ಮ ಮಕ್ಕಳನ್ನು ಎಲ್ ಕೆ ಜಿ ಇಂದ ಮಾದ್ಯಮಿಕ ಶಿಕ್ಷಣ ಪಡೆಯುವವರೆಗೆ ಹೆಚ್ಚು ಕಾಳಜಿ ಮಾಡುತ್ತಾರೆ. ನಂತರದಲ್ಲಿ ತಮ್ಮ ಮಕ್ಕಳು ಪ್ರಬುದ್ಧರಾಗಿದ್ದಾರೆ ಎಂಬ ಭಾವನೆಯಿಂದಲೋ ಎನೋ ಪದವಿ ಹಂತಕ್ಕೆ ಮಕ್ಕಳು ಬಂದ ನಂತರ ಪಾಲಕರು ಅವರ ದಿನನಿತ್ಯದ ಗತಿ ವಿಧಿಗಳ ಕುರಿತು ಹೆಚ್ಚು ಕಾಳಜಿ ವಹಿಸದಿರುವದು ಕಂಡು ಬರುತ್ತಿದೆ ಎಂದು ಎಂ ಇ ಎಸ್ ನ ಅಧ್ಯಕ್ಷ ಜಿ ಎಂ ಹೆಗಡೆ ಮುಳಖಂಡ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಎಮ್.ಎಮ್ .ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಪಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಇಂದು ಎಷ್ಟೋ ವಿದ್ಯಾರ್ಥಿಗಳು ತಮ್ಮ ಯೌವನವನ್ನು ದುರುಪಯೋಗ ಪಡಿಸಿಕೊಳ್ಳುವದು ಕಂಡುಬರುತ್ತಿದೆ, ಕಾಲೇಜಿನಲ್ಲಿ ಅಂತಹ ವಿದ್ಯಾರ್ಥಿಗಳನ್ನು ಕಂಡು ಹಿಡಿದು ಪಾಲಕರಿಗೆ ಕರೆ ಮಾಡಿದ ಮೇಲೆ ಅವರಿಗೆ ತಮ್ಮ ಮಕ್ಕಳ ಕುರಿತು ತಿಳಿಯುತ್ತದೆ. ಇಲ್ಲಿ ಎಷ್ಟೋ ಪಾಲಕರು ಮಕ್ಕಳ ತೆರನಾದ ಜವಾಬ್ದಾರಿಯನ್ನು ನಿಭಾಯಿಸದೇ ಇರುವದನ್ನು ನೋಡಬಹುದು. ಮುಂದಿನ ಉತ್ತಮ ಸಮಾಜಕ್ಕಾಗಿ ಮಕ್ಕಳ ಹಿಡಿತ ಪಾಲಕರಿಗಿರಬೇಕು. ನಮ್ಮ ಸಂಸ್ಥೆ ಎಲ್ಲಾ ರೀತಿಯ ಶೈಕ್ಷಣಿಕ ಪರಿಕರಗಳನ್ನು ಹೊಂದಿದ್ದು, ಉತ್ತಮ ಗುಣಮಟ್ಟದ ಶಿಕ್ಷಣ ವದಗಿಸುತ್ತಿದ್ದೇವೆ ಎಂದರು.
ಕಾಲೇಜಿನ ಉಪಸಮಿತಿ ಸದಸ್ಯ ಲೋಕೇಶ್ ಹೆಗಡೆ ಮಾತನಾಡಿ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯ ಜೊತೆಗೆ ಶಿಸ್ತು ಸಂಯಮ ಸಮಯ ಪಾಲನೆ ಮುಖ್ಯ ಎಂದರು. ಇದೇ ಸಮಯದಲ್ಲಿ ಅನೇಕ ಪಾಲಕರು ತಮ್ಮ ಅಭಿಪ್ರಾಯ ಸಲಹೆಗಳನ್ನು ನೀಡಿದರು.
ವೇದಿಕೆಯಲ್ಲಿ ಉಪಸಮಿತಿ ಸದಸ್ಯರಾದ ಜಿ ಎಸ್ ಹೆಗಡೆ, ಗಣೇಶ್ ಹೆಗಡೆ, ವಿನಾಯಕ ಹೆಗಡೆ ಉಪಸ್ಥಿತರಿದ್ದರು.ಪ್ರಾಚಾರ್ಯೆ ಡಾ ಕೋಮಲಾ ಭಟ್ ಪ್ರಾಸ್ತಾವಿಸಿ ಸ್ವಾಗತಿಸಿದರು. ಪ್ರೊ ಜಿ ಟಿ ಭಟ್ ವಂದಿಸಿದರು.ಪ್ರೊ ರವಿ ಕೋಳೇಕರ್ ನಿರೂಪಿಸಿದರು.