• Slide
    Slide
    Slide
    previous arrow
    next arrow
  • ಕಾರ್ಮಿಕರ ಕೊರತೆ ನಿವಾರಿಸಲು ದೋಟಿ ಕೌಶಲ್ಯ ಅಗತ್ಯ;  ಕ್ಯಾಂಪ್ಕೋ ಅಧ್ಯಕ್ಷ ಕಿಶೋರ ಕೊಡಗಿ

    300x250 AD

    ಶಿರಸಿ: ಇಂದಿನ ಅಡಿಕೆ ಕೃಷಿಯಲ್ಲಿನ ಕೊನೆಕೊಯ್ಲು ಮತ್ತು ಮದ್ದು ಸಿಂಪಡಣೆಗೆ ಅಗತ್ಯವಿರುವ ಕುಶಲ ಕಾರ್ಮಿಕರ ಕೊರತೆಯನ್ನು ನಿವಾರಿಸಲು ಅಡಿಕೆ ದೋಟಿ ಕೌಶಲ್ಯ ತರಬೇತಿಯನ್ನು ಆಯೋಜಿಸಲಾಗಿದೆ. ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಶಿಬಿರಾರ್ಥಿಗಳು ಅಡಿಕೆ ದೋಟಿ ಕೆಲಸವನ್ನು ಕಲಿತು ಆರ್ಥಿಕವಾಗಿ ಸದೃಢರಾಗಬೇಕು ಎಂದು  ಕ್ಯಾಂಪ್ಕೋ ಅಧ್ಯಕ್ಷ ಕಿಶೋರ ಕೊಡಗಿಯವರು ಕರೆ ನೀಡಿದರು. 

    ಕ್ಯಾಂಪ್ಕೋ ನಿ., ಕದಂಬ ಆರ್ಗ್ಯಾನಿಕ್ & ಮಾರ್ಕೆಟಿಂಗ್ ಟ್ರಸ್ಟ್, ಕೃಷಿ ವಿಜ್ಞಾನ ಕೇಂದ್ರ, ಎಪಿಎಂಸಿ ಶಿರಸಿ, ಬೆಂಗಳೆ ಸೇವಾ ಸಹಕಾರಿ ಸಂಘ ಇವರ ಸಹಯೋಗದಲ್ಲಿ ಶಿರಸಿ ತಾಲೂಕಿನ ಬೆಂಗಳೆಯಲ್ಲಿ ನಡೆದ “ಅಡಿಕೆ ದೋಟಿ ಕೌಶಲ್ಯ ತರಬೇತಿ” ಯನ್ನು ಉದ್ಘಾಟಿಸಿ ಮಾತನಾಡಿದ ಅವರು ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ದೋಟಿಯ ತಯಾರಿಕೆಯಲ್ಲಿ ಬಳಸುವ ಬಹುಮುಖ್ಯ ಕಚ್ಚಾವಸ್ತು ಕಾರ್ಬನ್ ಫೈಬರನ್ನು ಆಮದು ಮಾಡಿಕೊಳ್ಳಬೇಕಿದ್ದು ಇದಕ್ಕಿರುವ ತೆರಿಗೆಯಿಂದಾಗಿಯೇ ಬಹಳ ತುಟ್ಟಿಯೆನಿಸುತ್ತಿದೆ. ಇದನ್ನು ಮನಗಂಡು ಇದರ ತೆರಿಗೆ ಇಳಿಸುವ ಕುರಿತು ಎಲ್ಲ ರೈತ ಸಂಘಟನೆಗಳ ಪರವಾಗಿ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ ಎಂದರು.

    ಮುಖ್ಯ ಅತಿಥಿಗಳಾಗಿ ಎಪಿಎಂಸಿ ಅಧ್ಯಕ್ಷ ಶ್ರೀ ಶಿವಕುಮಾರ ದೇಸಾಯಿ ಗೌಡ, ಕೆ.ವಿ.ಕೆ ಮುಖ್ಯಸ್ಥ ಡಾ.ಮಂಜು ಎಂ.ಜೆ, ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಶ್ರೀ ಕೃಷ್ಣಕುಮಾರ ಎಚ್ ಎಂ, ತುಮ್ಕೋಸ್ ಅಧ್ಯಕ್ಷ ಶ್ರೀ ಅರ್ ಎಂ ರವಿ, ಅರಣ್ಯ ಮಹಾವಿದ್ಯಾಲಯದ ಡಾ ಕೃಷ್ಣ, ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಉಮಾನಂದ ಭಟ್ಟ ಕೊಡ್ಲಳ್ಳಿರವರು ಭಾಗವಹಿಸಿದ್ದರು.

    300x250 AD

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀ ಶಂಭುಲಿಂಗ ಹೆಗಡೆರವರು ಕದಂಬ ಮಾರ್ಕೆಟಿಂಗ್ ಮೂಲಕ ಅಡಿಕೆ ದೋಟಿಯ ಮೂಲಕ ಮದ್ದು ಸಿಂಪಡಣೆ ಮತ್ತು ಕೊನೆ ಕೊಯ್ಯುವವರ ತಂಡವನ್ನು ರಚಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗುವದು ಎಂದರು.

    ತರಬೇತಿಯಲ್ಲಿ ಫೈಬರ್ ದೋಟಿ ಮೂಲಕ ಅಡಿಕೆ ಕೊಯ್ಲು ವಿಧಾನ, ಮದ್ದು ಸಿಂಪಡಣೆಯ ಮಾಹಿತಿ ನೀಡುವದರೊಂದಿಗೆ ಡಿಜಿಟಲ್ ಬ್ಯಾಂಕಿಂಗ್ ಮಾಹಿತಿ, ಅಪಘಾತ ವಿಮೆ ಮಾಡುವುದು ಹೇಗೆ, ಖರ್ಚು ವೆಚ್ಚ ಲೆಕ್ಕವಿಟ್ಟು ಭವಿಷ್ಯ ಭದ್ರಪಡಿಸುವುದು ಹೇಗೆ ಎಂಬುದರ ಬಗ್ಗೆಯೂ ತಿಳಿಸಿಕೊಡಲಾಯಿತು. ಬೆಂಗಳೆ ಸೇವಾ ಸಹಕಾರಿ ಸಂಘ ನಿಯಮಿತ ಅಧ್ಯಕ್ಷ ಶ್ರೀ ಸುಧಾಕರ ಹೇಮಾದ್ರಿ ಸ್ವಾಗತಿಸಿದರು. 38 ಜನ ಶಿಬಿರಾರ್ಥಿಗಳು ಭಾಗವಹಿಸಿ ತರಬೇತಿ ಪಡೆದರು.

    Share This
    300x250 AD
    300x250 AD
    300x250 AD
    Leaderboard Ad
    Back to top