ಅಂಕೋಲಾ: ಸ್ವಾರ್ಥವಿಲ್ಲದೆ ನಿಸ್ವಾರ್ಥದಿಂದ ತಮ್ಮನ್ನು ತಾವೇ ದೇಶಕ್ಕಾಗಿ ಅರ್ಪಿಸಿಕೊಂಡು ದೇಶದ ಸ್ವಾತಂತ್ರ್ಯಕ್ಕಾಗಿ ಹಗಲಿರುಳು ಶ್ರಮಿಸಿದ ಅಂಕೊಲಿಗರು ಅಜರಾಮರರು. ಇಂತಹ ಮಹಾನ್ ದೇಶಪ್ರೇಮಿಗಳನ್ನು ನೀಡಿದ ಅಂಕೋಲೆಯ ಜನ ತಮ್ಮ ಸರ್ವಸ್ವವನ್ನು ಕಳೆದುಕೊಂಡು ನೀಡಿದ ಸ್ವಾತಂತ್ರ್ಯ ಇತ್ತೀಚಿಗೆ ತಮ್ಮ ಸ್ವಾರ್ಥ ಲಾಲಸೆಗಾಗಿ ಸ್ವೇಚ್ಚಾಚಾರವಾಗಿ ಬಳಕೆಯಾಗುತ್ತಿರುವುದು ಅತ್ಯಂತ ವಿಷಾದಕರ ಎಂದು ನಿವೃತ್ತ ಗ್ರಂಥಪಾಲಕ ರಾದ ಮಹಾಂತೇಶ್ ರೇವಡಿ ಹೇಳಿದರು.
ಅವರು ಪಟ್ಟಣದ ಕೆ ಎಲ್ ಇ ಸಂಸ್ಥೆ ಶಿಕ್ಷಣ ಮಹಾವಿದ್ಯಾಲಯ ಹಾಗೂ ಪ್ರಾದೇಶಿಕ ಪತ್ರಗಾರ ಇಲಾಖೆ ಧಾರವಾಡ ಸಹಯೋಗದಲ್ಲಿ ನಡೆದ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಸ್ವಾತಂತ್ರ ಹೋರಾಟದಲ್ಲಿ ಅಂಕೋಲಿಗರ ಕೊಡುಗೆ ಎಂಬ ವಿಷಯದ ಮೇಲೆ ಮಾತನಾಡುತ್ತಾ ಜಾತಿಭೇದವಿಲ್ಲದೆ ಕುಲಗೋತ್ರ ಎನ್ನದೆ ಮೇಲು ಕೀಳೆನ್ನದೆ ತಮ್ಮನ್ನು ತಾವು ಅರ್ಪಿಸಿಕೊಂಡ ಅಂಕೋಲದಲ್ಲಿ ನಾವು ವಾಸಿಸುತ್ತಿರುವುದು ಹೆಮ್ಮೆ ಎಂದು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪನ್ಯಾಸಕ ಮಂಜುನಾಥ ಇಟಗಿ ಹೊರಗಿನಿಂದ ಬಂದ ನಾವು ಅಂಕೋಲಾದ ಹೋರಾಟದ ಸಂಸ್ಕೃತಿ ಮೆಚ್ಚಿ ಅತ್ಯಂತ ಹೆಮ್ಮೆಯಿಂದ ಜೀವಿಸಲು ಇಂತ ಹಿರಿಜೀವಗಳ ಶ್ರಮ ಅತೀವ ಎಂದರು.
ಕಾರ್ಯಕ್ರಮದಲ್ಲಿ ಪೂರ್ಣಿಮಾ ಸಂಗಡಿಗರು ಪ್ರಾರ್ಥಿಸಿದರು. ಮೇಧಾ ಆಚಾರ್ಯ ಸ್ವಾಗತಿಸಿದರು. ದಿಶಾ ನಾಯಕ ಪರಿಚಯಿಸಿದರು. ಯೋಗೇಶ ಮುಕ್ರಿ ವಂದಿಸಿದರು. ಶ್ರದ್ಧಾ ನಾಯಕ್ ನಿರೂಪಿಸಿದರು.