• first
  second
  third
  previous arrow
  next arrow
 • ಅರಣ್ಯ ಇಲಾಖೆ ದೌರ್ಜನ್ಯ; ಮುಖ್ಯಮಂತ್ರಿ ಗಮನ ಸೆಳೆಯಲು ಜು.16ಕ್ಕೆ ಕಾರವಾರದಲ್ಲಿ ಅರಣ್ಯವಾಸಿಗಳ ಬೃಹತ್ ಪ್ರತಿಭಟನೆ

  300x250 AD

  ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯಿಂದ ಅರಣ್ಯವಾಸಿ ಅತಿಕ್ರಮಣದಾರರ ಮೇಲೆ ನಿರಂತರ ದೌರ್ಜನ್ಯ, ಕಿರುಕುಳ, ಸಾಗುವಳಿಗೆಗೆ ಅತಂಕ ಉಂಟುಮಾಡುತ್ತಿರುವ ಹಾಗೂ ಕಾನೂನಿಗೆ ವ್ಯತಿರಿಕ್ತವಾಗಿ ಅಲ್ಲದೇ ಮುಖ್ಯಮಂತ್ರಿಗಳ ನಿರ್ದೇಶನವನ್ನು ಉಲ್ಲಂಘಿಸುವ ಜಿಲ್ಲೆಯ ಅರಣ್ಯ ಇಲಾಖೆ ವಿರುದ್ಧ ಮುಖ್ಯಮಂತ್ರಿ ಕಾರವಾರಕ್ಕೆ ದಿನಾಂಕ 16 ರಂದು ಆಗಮಿಸುವ ಹಿನ್ನೆಲೆಯಲ್ಲಿ ಸಾವಿರಾರು ಅರಣ್ಯವಾಸಿಗಳು ಕಾರವಾರದಲ್ಲಿ ಅಂದು ಅರಣ್ಯ ಇಲಾಖೆ ವಿರುದ್ಧ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲು ಚಿಂತಿಸಲಾಗಿದೆ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

  ಕಾಯಿದೆ ಅಡಿಯಲ್ಲಿ ಅರಣ್ಯ: ಅರಣ್ಯ ವಾಸಿಗಳ ಅರ್ಜಿಗಳು ಊರ್ಜಿತವಿರುವಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿ ನಿರಂತರ ಅರಣ್ಯ ವಾಸಿಗಳ ಹಕ್ಕಿಗೆ ಅರಣ್ಯ ಇಲಾಖೆಯು ಆತಂಕ ಉಂಟುಮಾಡುತ್ತಿರುವ ಹಿನ್ನೆಲೆಯಲ್ಲಿ ತೀವ್ರ ಪ್ರತಿಭಟನೆ ಜರಗುತ್ತಿರುವುದು ಅನಿವಾರವಾಗಿದೆ ಎಂದು ಅವರು ಹೇಳಿದರು.

  ಕರ್ನಾಟಕ ಉಚ್ಛ ನ್ಯಾಯಾಲಯವೂ ಅರಣ್ಯ ವಾಸಿಗಳಿಗೆ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿ ಅತಿಕ್ರಮಣದಾರರಿಗೆ ಆತಂಕ ಉಂಟು ಮಾಡಬಾರದೆಂಬ ಆದೇಶವಿದ್ದಾಗಲೂ, ರಾಜ್ಯ ಸರಕಾರದ ಮುಖ್ಯ ಮಂತ್ರಿಗಳು ಅಕ್ಟೋಬರ್ 13, 2019 ರ ವಿಧಾನ ಸಭೆಯ ಅಧಿವೇಶನದಲ್ಲಿ ಅರಣ್ಯ ವಾಸಿಗಳಿಗೆ ಕಿರುಕುಳ, ದೌರ್ಜನ್ಯ, ಸಾಗುವಳಿಗೆಗೆ ಆತಂಕ ಉಂಟುಮಾಡಬಾರದೆಂದು ಅಧಿವೇಶನದಲ್ಲಿಯೇ ಅರಣ್ಯ ಇಲಾಖೆಗೆ ಸ್ಪಷ್ಟ ಎಚ್ಚರಿಕೆ ಮತ್ತು ನಿರ್ದೇಶನ ನೀಡಿದಾಗಿಯೂ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾನೂನು ಬಾಹಿರ ಕೃತ್ಯ ಮುಂದುವರೆಸಿರುವುದು ಖಂಡನಾರ್ಹ ಎಂದು ಅವರು ಹೇಳಿದರು.

  300x250 AD

  ಮುಖ್ಯಮಂತ್ರಿಗಳ ಗಮನ ಸೆಳೆಯುವ ಉದ್ದೇಶದಿಂದ ದಿನಾಂಕ 16 ರಂದು ಮುಖ್ಯಮಂತ್ರಿಗಳು ಕಾರವಾರಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಅರಣ್ಯ ಇಲಾಖೆಯ ವಿರುದ್ಧ ಬೃಹತ್ ಪ್ರತಿಭಟನೆ ಸಂಘಟಿಸಲು ಚಿಂತಿಸಲಾಗಿದೆ ಎಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.

  85 ಸಾವಿರ ಅತಿಕ್ರಮಣದಾರರು ಅತಂತ್ರ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ 87625 ಅತಿಕ್ರಮಣದಾರರು ಅರ್ಜಿ ಸಲ್ಲಿಸಿದ್ದು ಅವುಗಳಲ್ಲಿ 65,220 ಅರ್ಜಿಗಳು ತೀರಸ್ಕಾರವಾಗಿದ್ದು ಕೇವಲ 2,852 ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರಕಿರುವುದರಿಂದ ಜಿಲ್ಲೆಯಲ್ಲಿ ವಾಸಿಸುವ ಒಂದು ಮೂರಾಂಶ ಅಂದರೆ 85,000 ಕ್ಕೂ ಮಿಕ್ಕಿ ಅರಣ್ಯ ವಾಸಿಗಳ ಕುಟುಂಬ ಇತ್ತೀಚಿನ ಸರ್ವೋಚ್ಚ ನ್ಯಾಯಾಲಯದ ಆದೇಶದಿಂದ ಅತಂತ್ರವಾಗುವ ಭೀತಿಯಲ್ಲಿರುವ ಅಂಶವನ್ನ ಮುಖ್ಯಂತ್ರಿಗಳ ಗಮನಕ್ಕೆ ಪ್ರತಿಭಟನೆ ಮೂಲಕ ತರಲಾಗುವುದೆಂದು ಜಿಲ್ಲಾ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

  Share This
  300x250 AD
  300x250 AD
  300x250 AD
  Back to top