ಹೊನ್ನಾವರ : ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ತಹಶೀಲ್ದಾರಾದ ಪ್ರದೀಪ್ ಹಿರೇಮಠ ಇವರ ಮೇಲೆ ಕರ್ತವ್ಯದ ಸಮಯದಲ್ಲಿ ಕೆಲವೊಂದು ರಾಜಕೀಯ ಪ್ರೇರಿತ ವ್ಯಕ್ತಿಗಳಿಂದ ಹಲ್ಲೆ ಮಾಡಿದ್ದು ವಿಷಾದನೀಯವಾಗಿದೆ. ಇಂತವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳುವಂತೆ ತಾಲೂಕಾ ಸರ್ಕಾರಿ ನೌಕರರ ಸಂಘದಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಸಮಸ್ತ ನೌಕರರ ಪರವಾಗಿ ಹೊನ್ನಾವರ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ರಾಜಕುಮಾರ ಟಿ ನಾಯ್ಕ ಇವರ ಅಧ್ಯಕ್ಷತೆಯಲ್ಲಿ ತಾಲೂಕಿನ ಎಲ್ಲಾ ಇಲಾಖೆಯ ವೃಂದ ಸಂಘದ ಅಧ್ಯಕ್ಷರು ಹಾಗೂ ಪಧಾದಿಕಾರಿಗಳು ಕಾಯ9ಕಾರಿ ಸಮಿತಿ ಸದಸ್ಯರು ಹಾಗೂ ತಾಲೂಕಿನ ನೌಕರರು ಭಾಗವಹಿಸಿ ಹೊನ್ನಾವರ ತಹಶಿಲ್ದಾರ ನಾಗರಾಜ ನಾಯ್ಕಡ ಇವರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು.