ಹೊನ್ನಾವರ: ಪಟ್ಟಣದ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯು ಶಾಲಾ ವಿದ್ಯಾರ್ಥಿಗೆ ಬಾಸುಂಡೆ ಬರುವ ತನಕ ಥಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಘಟನೆಯಿಂದ ವಿದ್ಯಾರ್ಥಿನಿಗೆ ವಿಪರೀತ ಗಾಯವಾಗಿದ್ದು ,ಪಾಲಕರು-ಪೋಷಕರು, ಶಿಕ್ಷಕಿ ವಿರುದ್ದ ಆಕ್ರೋಶಿತರಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಶಾಲಾ ವಿದ್ಯಾರ್ಥಿಗಳ ಯಾವುದೋ ಪ್ರಮಾದಕ್ಕೆ ಕುಪಿತಗೊಂಡ ಶಿಕ್ಷಕಿಯಿಂದ ಇಂತಹ ಕೃತ್ಯ ನಡೆದಿದೆ ಎನ್ನಲಾಗಿದೆ. ವಿಷಯ ತಾಲೂಕಿನಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬುತ್ತಲೇ ಶಿಕ್ಷಕಿಯು ಪಾಲಕರಲ್ಲಿ ಕ್ಷಮೇ ಕೇಳಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ತಲುಪಿದೆಯೋ ಅಥವಾ ತಲುಪಿದರು ಜಾಣಮೌನ ವಹಿಸಿದ್ದಾರೆಯೋ? ಎನ್ನುವ ಬಗ್ಗೆ ಪಾಲಕ-ಪೋಷಕ ವರ್ಗದಲ್ಲಿ ಮೂಡಿದೆ. ಅದು ಯಾವ ಶಾಲೆ,ಯಾವ ಶಿಕ್ಷಕಿ,ಏಟು ತಿಂದ ವಿದ್ಯಾರ್ಥಿ ಯಾರು ಎನ್ನುವುದು ಸೂಕ್ತ ತನಿಖೆಯಿಂದ ತಿಳಿದು ಬರಬೇಕಿದೆ.