ಭಟ್ಕಳ: ಬೈಕ್ ಸವಾರನಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡು ಮೃತಪಟ್ಟ ಹಿಂಬದಿ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾದ ಘಟನೆ ಮುರುಡೇಶ್ವರದ ಸಭಾತಿ ಕ್ರಾಸ್ ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಮೃತಪಟ್ಟ ಬೈಕ ಸವಾರನು ಮುರುಡೇಶ್ವರದ ಜೊಸೆಫ್ ತಂದೆ ಪ್ರಾನ್ಸಿಸ್‍ಲೂಹಿಸ್ (63) ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಲಾರೆನ್ಸ ತಂದೆ ಗೋನ್ಸಾಲಿಸ್ (49) ಎಂದು ಗುರುತಿಸಲಾಗಿದೆ . ಹೊನ್ನಾವರದ ಕಡೆಯಿಂದ ಬಂದ ಕಾರು ಬೈಕ್ ಸವಾರನಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದ್ದು, ಮರುಡೇಶ್ವರ ಠಾಣಾ ಪಿ.ಎಸ್.ಐ. ರವೀಂದ್ರ ಬೀರಾದಾರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.