• Slide
    Slide
    Slide
    previous arrow
    next arrow
  • ಹುಮ್ನಾಬಾದ್ ತಹಶೀಲ್ದಾರ್ ಮೇಲೆ ಹಲ್ಲೆ ನಡೆಸಿದವರ ವಿರುದ್ದ ಕ್ರಮ ಕೈಗೊಳ್ಳುವಂತೆ ಮನವಿ

    300x250 AD

    ಭಟ್ಕಳ: ಬೀದರ ಜಿಲ್ಲೆಯ ಹುಮ್ನಾಬಾದ್ ನಲ್ಲಿ ಕರ್ತವ್ಯನಿರತ ತಹಶೀಲ್ದಾರರ ಮೇಲೆ ಹಲ್ಲೆ ನಡೆಸಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭಟ್ಕಳ ಸರಕಾರಿ ನೌಕರರ ಸಂಘದಿಂದ ಭಟ್ಕಳ ಉಪವಿಭಾಗಾದಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ನೀಡಲಾಯಿತು.

    ಹುನ್ನಾಬಾದ್ ತಹಶೀಲ್ದಾರರಾದ ಪ್ರದೀಕಕುಮಾರ ಹಿರೇಮಠರವರು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಕೆಲವು ದುಷ್ಕರ್ಮಿಗಳು ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಯನ್ನು ಮಾಡಿದ್ದು,ಈ ಘಟನೆಯನ್ನು ಭಟ್ಕಳ ಸರಕಾರಿ ನೌಕರರ ಸಂಘವು ಖಂಡಿಸುತ್ತದೆ ಮತ್ತು ಸರಕಾರವು ಹಲ್ಲೆಕೋರರನ್ನು ತಕ್ಷಣ ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇತ್ತೀಚಿಗೆ ಸರಕಾರಿ ನೌಕರರ ಮೇಲೆ ಮೇಲಿಂದ ಮೇಲೆ ಇಂತಹ ಅಹಿತಕರ ಘಟನೆ ನಡಸಯದಂತೆ ತಡೆಯಲು ಸೂಕ್ತ ಭದ್ರತೆಯನ್ನು ಒದಗಿಸುವುದು ಹಾಗೂ ಕಠಿಣ ಕಾನೂನು ಕ್ರಮ ಜಾರಿಗೆ ತಂದು ನೌಕರರು ಭಯಮುಕ್ತ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
    ಮನವಿಯನ್ನು ನೌಕರರ ಸಂಘದ ಆದ್ಯಕ್ಷ ಮೋಹನ ನಾಯ್ಕ ಕಚೇರಿಯ ವ್ಯವಸ್ಥಾಪಕರಿಗೆ ನೀಡಿದರು. ಈ ಸಂದರ್ಭದಲ್ಲಿ ನೌಕರರ ಸಂಘದ ಉಪಾಧ್ಯಕ್ಷ ಗಣೇಶ ಹೆಗಡೆ, ನೌಕರರ ಸಂಘದ ಪಧಾಧಿಕಾರಿಗಳಾದ ಪ್ರಕಾಶ ಶಿರಾಲಿ ನಾಗರಾಜ ಪಟಗಾರ, ಮತ್ತಿತರರು ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top