ಭಟ್ಕಳ: ನಗರದ ಸೋನಾರಕೇರಿಲ್ಲಿನ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಸಕ ಸುನೀಲ್ ನಾಯ್ಕ ಆಗಮಿಸಿ ಶಾಲೆಯಲ್ಲಿರುವ ಕುಂದು ಕೊರತೆಗಳ ಬಗ್ಗೆ ಚರ್ಚಿಸಲು ಶಾಲಾಬಿವೃದ್ದಿ ಸಮೀತಿಯೊಂದಿಗೆ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ವೆಂಕಟೇಶ ನಾಯ್ಕ ಹಾಗೂ ಸದಸ್ಯರೆಲ್ಲರೂ ಸೇರಿ ಶಾಲೆಗೆ 4 ಹೊಸ ಶಾಲಾ ಕೊಠಡಿಯನ್ನು ಮಂಜೂರಿ ಮಾಡಬೇಕೆಂದು ಆಗ್ರಹಿಸಿದರು. ಅದರಂತೆ ಶಾಲಾ ಅಭಿವೃದ್ಧಿಗೆ, ಮಕ್ಕಳ ಉತ್ತಮ ಕಲಿಕೆಗೆ ಪೂರಕವಾಗಿ ಯೋಜನೆಗಳನ್ನು ರೂಪಿಸುವಂತೆ ಮಾನ್ಯ ಶಾಸಕರಿಗೆ ಮನವಿ ಸಲ್ಲಿಸಿದರು.
ಶಾಲೆಯ ಕುಂದುಕೊರತೆಗಳನ್ನು ಗಮನಿಸಿದ ಶಾಸಕರು ಮಾತನಾಡಿ ನಗರೋತ್ಥಾನ ಯೋಜನೆ ಅಡಿಯಲ್ಲಿ ಶಾಲೆಯ ಅಭಿವೃದ್ಧಿಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಯೋಜನೆಗಳನ್ನು ರೂಪಿಸಲಾಗುವುದು ಎಂದು ಭರವಸೆ ನೀಡಿದರು ಅಲ್ಲದೆ ಶಾಲೆಗೆ ಸಂಬಂಧಿಸಿದಂತೆ ಶಾಲಾ ಕಟ್ಟಡ ಹಾಗೂ ಇನ್ನಿತರ ಬೇಡಿಕೆಗಳಿಗೆ ಅನುಗುಣವಾಗಿ ಕ್ರಿಯಾ ಯೋಜನೆಯನ್ನು ರೂಪಿಸುವಂತೆ ಹಾಜರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಶಾಲೆಯ ಅಭಿವೃದ್ಧಿ ವಿಚಾರದಲ್ಲಿ ಪಾಲಕರು ಹಾಗೂ ಸ್ಥಳೀಯ ನಾಗರಿಕರು ಹಿಂದೆ ನಡೆದಂತ ಗೊಂದಲಗಳನ್ನು ಮರೆತು ಶಾಲಾ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸುವಂತೆ ಮನವಿ ಮಾಡಿದರು.
ಶಾಲೆಗೆ ಭೇಟಿ ನೀಡಿದಂತ ಶಾಸಕರನ್ನು ಶಾಲಾಭಿವೃದ್ದಿ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರು, ಎಸ್ಡಿಎಂಸಿ ಸದಸ್ಯರು, ಶಾಲೆಯ ಹಳೆವಿದ್ಯಾರ್ಥಿ ಸಂಘದ ಸದಸ್ಯರು, ಊರ ಪ್ರಮುಖರು, ನಾಗರಿಕರು ಹಾಜರಿದ್ದರು. ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಉದಯ ರಾಯ್ಕರ್ ಸರ್ವರನ್ನೂ ಸ್ವಾಗತಿಸಿದರು, ಅಧ್ಯಕ್ಷರಾದ ವೆಂಕಟೇಶ ನಾಯ್ಕ ವಂದಿಸಿದರು.