ಅಂಕೋಲಾ : ಭಾರತೀಯ ಜನತಾ ಪಕ್ಷದ ಅಚವೆ ಶಕ್ತಿ ಕೇಂದ್ರದ ಸಾಮಾನ್ಯ ಸಭೆ ಶುಕ್ರವಾರ ಅಂಕೋಲಾ ತಾಲ್ಲೂಕಿನ ಅಚವೆಯ ಬೊಮ್ಮಯ್ಯ ದೇವಸ್ಥಾನದ ಆವಾರದಲ್ಲಿ ನಡೆಸಲಾಯಿತು.
ಸಭೆಯಲ್ಲಿ ಪಕ್ಷ ಸಂಘಟನೆ, ಕಾರ್ಯಕರ್ತರ ಜವಾಬ್ದಾರಿಗಳು, ಮುಂದಿನ ದಿನಗಳಲ್ಲಿ ಪಕ್ಷದ ಕಾರ್ಯ- ಯೋಜನೆಗಳು, ಅಚವೆ ಪಂಚಾಯತ ವ್ಯಾಪ್ತಿಯಲ್ಲಾಗಬೇಕಿರುವ ಅಭಿವೃದ್ಧಿ ಕೆಲಸಗಳು ಈ ಎಲ್ಲದರ ಕುರಿತಾಗಿ ವಿಷಯ ವಿನಿಮಯ – ಚರ್ಚೆ ನಡೆಯಿತು.
ಈ ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿಗಳಾದ ನಿತ್ಯಾನಂದ ಗಾಂವ್ಕರ, ರೈತಮೊರ್ಚಾ ಅಂಕೋಲಾ ಮಂಡಲ ಅಧ್ಯಕ್ಷರು,ಅಚವೆ ಪಂಚಾಯತ ಪ್ರಭಾರಿಗಳು ಆದ ವಿ.ಎಸ್. ಭಟ್ಟ ಕಲ್ಲೇಶ್ವರ, ಅಂಕೋಲ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರಾಘು ಭಟ್, ಆಗಸೂರು ಮಹಾಶತ್ತಿ ಕೇಂದ್ರದ ಅಧ್ಯಕ್ಷರಾದ ಎಮ್ ಎನ್ ಭಟ್ಟ, ಅಚವೆ ಶಕ್ತಿ ಕೇಂದ್ರ ಅಧ್ಯಕ್ಷರಾದ ಸುಬ್ರಮಣ್ಯ ನಾಯಕ,ಅಚವೆ ಪಂಚಾಯತ ಮಾಜಿ ಅಧ್ಯಕ್ಷರಾದ ಉದಯ ಗುನಗಾ, ಹಾಲಿ ಅಧ್ಯಕ್ಷರಾದ ಶ್ರೀದೇವಿ ಪಟಗಾರ, ಎಸ್ಟಿ ಮೋರ್ಚಾ ತಾಲ್ಲೂಕಾ ಅಧ್ಯಕ್ಷರಾದ ಸುಬ್ರಾಯ ಸಿದ್ಧಿ, ಬೂತ್ ಅಧ್ಯಕ್ಷರುಗಳಾದ ಬೈರವೇಶ್ವರ ಭಟ್ಟ , ಮಂಜುನಾಥ ಹೆಗಡೆ , ಪಕ್ಷ ಪ್ರಮುಖರಾದ ತಿಮ್ಮಣ್ಣ ನಾಯಕ, ಈಶ್ವರ ನಾಯಕ, ಪರಮೇಶ್ವರ ಪಟಗಾರ, ಮಾರುತಿ ನಾಯಕ , ಕಮಲಾಕರ ನಾಯಕ, ಲತೀಶ ನಾಯಕ, ಸಚೀನ ಗುನಗ , ಮನೀಶ್ ಗುನಗಾ ಹಾಗೂ ಶಕ್ತಿಕೇಂದ್ರ ವ್ಯಾಪ್ತಿಯ ವಿವಿದ ಸ್ಥರದ ಪದಾಧಿಕಾರಿಗಳು , ಕಾರ್ಯಕರ್ತರುಗಳು ಪಾಲ್ಗೊಂಡಿದ್ದರು.