• Slide
    Slide
    Slide
    previous arrow
    next arrow
  • ಟೊಂಕದ ಕಡಲತೀರದ ಹತ್ತಿರ 50ಕ್ಕೂ ಹೆಚ್ಚು ರಿಡ್ಲೆ ಜಾತಿಯ ಆಮೆಗಳ ಮೊಟ್ಟೆಗಳು ಪತ್ತೆ

    300x250 AD

    ಹೊನ್ನಾವರ : ಅಳಿವಿನ ಅಂಚಿನಲ್ಲಿರುವ ಕಡಲಾಮೆಗಳು ಮೊಟ್ಟೆ ಇಡುವ ಪ್ರದೇಶವೆಂದು ಗುರುತಿಸಲ್ಪಟ್ಟಿರುವ ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕದ ಕಡಲತೀರದ ಉದ್ದೇಶಿತ ವಾಣಿಜ್ಯ ಬಂದರು ಪ್ರದೇಶದ ಹತ್ತಿರ 50ಕ್ಕೂ ಹೆಚ್ಚು ಸಂಖ್ಯೆಯಲ್ಲಿ ರಿಡ್ಲೆ ಜಾತಿಯ ಆಮೆಗಳ ಮೊಟ್ಟೆಗಳು ರಸ್ತೆ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ಪತ್ತೆಯಾಗಿರುವ ಬಗ್ಗೆ ಸ್ಥಳೀಯ ಮಾಹಿತಿ ಲಭಿಸಿದೆ.

    ಸ್ಥಳದಲ್ಲಿ ತಾಲ್ಲೂಕು ಆಡಳಿತ ನಿಷೇದಾಜ್ಞೆ ವಿಧಿಸಿ ಬಿಗಿ ಪೋಲೀಸ್ ಬಂದೋ ಬಸ್ತಿನಲ್ಲಿ ಉದ್ದೇಶಿತ ವಾಣಿಜ್ಯ ಬಂದರು ಯೋಜನೆಗಾಗಿ ಖುದ್ದು ಜಿಲ್ಲಾ ಆಡಳಿತದ ಉಸ್ತುವಾರಿಯಲ್ಲಿ ಸಿಆರ್ ಝೆಡ್ ಸಹಿತ ಹಲವು ನಿಯಮಗಳನ್ನು ಉಲ್ಲಂಘಿಸಿ ಕಡಲಾಮೆಗಳು ಮೊಟ್ಟೆ ಇಡುವ ಕಾಸರಕೋಡ ಟೊಂಕದ ಕಡಲತೀರದಿಂದ ವಾಣಿಜ್ಯ ಬಂದರು ಯೋಜನಾಪ್ರದೇಶದವರೆಗೆ ಬ್ರಹತ್ ಜೆಸಿಬಿ ಯಂತ್ರಗಳನ್ನು ಬಳಸಿ ರಸ್ತೆ ಕಾಮಗಾರಿ ನಿರ್ವಹಿಸುತ್ತಿರುವ ಬಗ್ಗೆ ಸ್ಥಳೀಯರು ಹಾಗೂ ಕಡಲವಿಜ್ಞಾನಿಗಳು ಈಗಾಗಲೇ ರಾಜ್ಯ, ಕೇಂದ್ರ ಮತ್ತು ಅಂತರರಾಷ್ಟ್ರೀಯ ಜೀವವೈವಿಧ್ಯಮಂಡಳಿಗಳ ಗಮನಸೆಳೆದಿದ್ದರು.

    300x250 AD

    ಶುಕ್ರವಾರ ಕಡಲಾಮೆಗಳು ಮೊಟ್ಟೆ ಇಟ್ಟಿರುವ ಪ್ರದೇಶದ ತೀರಸನಿಹದಲ್ಲಿ ಬ್ರಹತ್ ಜೆಸಿಬಿ ಯಂತ್ರಗಳು ಓಡಾಟ ನಡೆಸಿದ ಕುರುಹುಗಳು ಸ್ಥಳದಲ್ಲಿ ಕಂಡುಬಂದು ಸ್ಥಳೀಯ ಮೀನುಗಾರರು ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಘಟನೆ ನಡೆದಿದ್ದು ಕಾಸರಕೋಡ ಟೊಂಕದ ಕಡಲತೀರವು ಕಡಲಾಮೆಗಳು ಮೊಟ್ಟೆ ಇಡುವ ಪ್ರದೇಶವಾಗಿದ್ದು ಇಲ್ಲಿ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸುತ್ತ ಬಂದಿರುವ ಕಡಲವಿಜ್ಞಾನಿ ಡಾ. ಪ್ರಕಾಶ ಮೇಸ್ತ ಮತ್ತು ಸ್ಥಳೀಯರ ಅಭಿಪ್ರಾಯಕ್ಕೆ ಇನ್ನಷ್ಟು ಪುರಾವೆ ಸಿಕ್ಕಂತಾಗಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ . ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರ ಸಹಾಯ ಪಡೆದು ಆಮೆಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳುತ್ತಿರುವದು ಕಂಡು ಬಂದಿದೆ. ಶನಿವಾರ ಕಡಲಾಮೆ ಮೊಟ್ಟೆಗಳ ಗೂಡಿಗೆ ಪಂಜರನಿರ್ಮಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top