
ಕುಮಟಾ: ಉಡುಪಿಯಲ್ಲಿ ಭಾನುವಾರ ಅಪಹರಣಕ್ಕೆ ಒಳಗಾದ 2.5 ವರ್ಷದ ಪುಟ್ಟ ಬಾಲಕನನ್ನು ಕುಮಟಾ ರೈಲ್ವೆ ನಿಲ್ದಾಣದಲ್ಲಿ ಪತ್ತೆ ಹಚ್ಚಿ ರಕ್ಷಿಸಿದ ಪೆÇಲೀಸರು ಆರೋಪಿಯನ್ನು ಬಂಧಿಸಿದ ಘಟನೆ ಸೋಮವಾರ ನಡೆದಿದೆ.
ಬಾಗಲಕೋಟೆಯ ಪರಶುರಾಮ ಆರೋಪಿಯಾಗಿದ್ದಾನೆ. ಈತನು ಎರಡೂವರೆ ವರ್ಷದ ಪುಟ್ಟ ಮಗುವಿಗೆ ಚಾ ತಿಂಡಿ ಕೊಡಿಸುವುದಾಗಿ ಹೇಳಿ ಹೋದವನು ಮಗುವನ್ನು ಮರಳಿ ಕರೆದುಕೊಂಡು ಬರದೇ ಇದ್ದ ಕಾರಣ ಉಡುಪಿ ಪೆÇಲೀಸ್ ಠಾಣೆಯಲ್ಲಿ ಮಗುವಿನ ಪಾಲಕರು ಪ್ರಕರಣ ದಾಖಲಿಸಿದ್ದರು. ಸಿಸಿಟಿವಿ ಆಧಾರದ ಮೇಲೆ ಆರೋಪಿಯ ಜಾಡು ಹಿಡಿದ ಪೆÇಲೀಸರು ಕುಮಟಾ ಪೆÇಲೀಸರ ಸಹಕಾರದೊಂದಿಗೆ ಕುಮಟಾ ರೈಲ್ವೆ ನಿಲ್ದಾಣದಲ್ಲಿ ಮಗುವನ್ನು ಪತ್ತೆ ಹಚ್ಚಿ ರಕ್ಷಿಸಿ, ಆರೋಪಿಯನ್ನು ಬಂಧಿಸಿದ್ದಾರೆ.
ಈ ಕುರಿತು ಉಡುಪಿ ನಗರದ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.