• Slide
    Slide
    Slide
    previous arrow
    next arrow
  • ಹುಲೇಕಲ್ ಮದರ ತೆರೆಸಾ ಇಕೋ ಕ್ಲಬ್’ಗೆ ಜಿಲ್ಲಾ ಪ್ರಶಸ್ತಿ

    300x250 AD

    ಶಿರಸಿ: ತಾಲೂಕಿನ ಹುಲೇಕಲ್ ಯೂತ್ ಫಾರ್ ಸೇವಾ ದತ್ತು ಯೋಜನೆಯ ಶಾಲೆಯಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ “ಮದರ ತೆರೆಸಾ ಇಕೋ ಕ್ಲಬ್” ಗೆ 2020-2021 ರಲ್ಲಿ ಮಾಡಿದ ಪರಿಸರ ಚಟುವಟಿಕೆಗಳನ್ನು ಆಧರಿಸಿ “ಜಿಲ್ಲಾ ಮಟ್ಟದ ಅತ್ಯುತ್ತಮ ಇಕೋ ಕ್ಲಬ್ ಪ್ರಶಸ್ತಿ “ಲಭಿಸಿದೆ.

    “ಹಸಿರು ಪಯಣ ನಿಸರ್ಗ” ಜ್ಞಾನ ಶಿಕ್ಷಣ ಶಿಬಿರದ ಮೂಲಕ ಮಕ್ಕಳಿಗೆ ಪರಿಸರ ರಕ್ಷಣೆಯ ಅವಶ್ಯಕತೆಗಳು, ವನ್ಯ ಜೀವಿ ಮತ್ತು ಹಾವು ಕಪ್ಪೆಗಳ ಮಾಹಿತಿ, ಬಾಟ್ಲಿಂಗ್ ಇರಿಗೇಶನ್, ಪೇಪರ್ ಬ್ಯಾಗ್ ತಯಾರಿಕೆ,ಬೀಜದುಂಡೆ ತಯಾರಿಕೆ, ಕೆರೆಗಳ ಮಾಹಿತಿ, ಪಕ್ಷಿ ವೀಕ್ಷಣೆ, ವನ ನಿರ್ಮಾಣದ ಮಾಹಿತಿ, ಔಷಧ ಸಸ್ಯ ಪರಿಚಯ, ಔಷಧ ಸಸ್ಯ ಎಲೆಗಳ ಹರ್ಬೇರಿಯಮ್, ಕಸದಿಂದ ರಸ, ಪರಿಸರ ರಸಪ್ರಸ್ನೆ,ಪರಿಸರಗೀತೆಅಭ್ಯಾಸವನ್ನು ಯೂತ್ ಫಾರ್ ಸೇವಾದಿಂದ ತರಬೇತಿ ನೀಡಲಾಗಿತ್ತು.

    ಪ್ಲಾಂಟ್ ಫ್ಲಾಗ್ ಎಂಬ ವಿಶೇಷ ಯೋಜನೆಯಡಿಯಲ್ಲಿ ಮಕ್ಕಳಿಗೆ ಔಷಧ ಸಸ್ಯ ಬೆಳೆಸುವದರ ಜೊತೆಗೆ ಪ್ಲಾಸ್ಟಿಕ್ ಧ್ವಜ ಬಳಕೆ ಮಾಡದೇ ಇರುವ ಕುರಿತು ತರಭೇತಿ ನೀಡಲಾಗಿತ್ತು, ಇದರಲ್ಲಿ 32 ಮಕ್ಕಳು ಔಷಧ ಸಸ್ಯ ಹಾಗೂ ತರಕಾರಿ ಬೆಳೆಸಿದ್ದರು.ಇದಲ್ಲದೇ ಮಗುವಿಗೊಂದು ಗಿಡ ಶಾಲೆಗೊಂದು ವನ ಘೋಷಣೆಯಡಿ ಗಿಡಬೆಳಡಸಲು ಪ್ರೇರಣೆ, ಪರಿಸರ ಭಿತ್ತಿ ಪತ್ರ ತಯಾರಿಕೆ, ಭಾಷಣ ಸ್ಪರ್ಧೇ, ಏಕ್ ಮಿನಿಟ್ ಮರಗಳ ಹೆಸರು ಹೇಳುವ ಸ್ಪರ್ಧೇ, ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಜ್ಞಾನ ತುಂಬುವ ಕಾರ್ಯ ಮಾಡಿರುವದರಿಂದ 2020-2021 ರ ಜಿಲ್ಲಾ ಮಟ್ಟದ ಅತ್ಯುತ್ತಮ ಇಕೋಕ್ಲಬ್ ಪ್ರಶಸ್ತಿ ಲಭಿಸಿದೆ.ಜನವರಿ 26 ಗಣರಾಜ್ಯತ್ಸವ ದಿನ ದಂದು ಶಿರಸಿ ಉಪವಿಭಾಗಾಧಿಕಾರಿ ದೇವರಾಜ ಅವರು ಇಕೋ ಕ್ಲಬ್ ನೋಡೆಲ್ ಶಿಕ್ಷಕಿ ಕಲಾವತಿ ಅವರಿಗೆ ಪ್ರದಾನ ಮಾಡಿದರು.

    300x250 AD

    ಈ ಕಾರ್ಯದಲ್ಲಿ ಇಕೋಕ್ಲಬ್ ನೋಡೆಲ್ ಶಿಕ್ಷಕಿ ಕಲಾವತಿ ಹೆಗಡೆ , ಯೂತ್ ಫಾರ್ ಸೇವಾ ಉಮಾಪತಿ ಭಟ್ಟ್ ಕೆವಿ, ಶಿಕ್ಷಕಿ ಸುನಂದಾ ಹೆಗಡೆ, ಮುಖ್ಯಾಧ್ಯಾಪಕ ಕೆವಿ ಭಟ್ಟ್, ಎಸ್.ಡಿ.ಎಂ.ಸಿ ಅಧ್ಯಕ್ಷ ಗಜಾನನ ನಾಯ್ಕ ಮತ್ತು ಶಿಕ್ಷಕ ವೃಂದ ಪಾಲಕರು ಸಹಕರಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top