• Slide
    Slide
    Slide
    previous arrow
    next arrow
  • ಅಕ್ರಮವಾಗಿ ಮರದ ನಾಟಾ ಸಾಗಾಟ;ಇಬ್ಬರು ಆರೋಪಿಗಳ ಬಂಧನ

    300x250 AD

    ಕುಮಟಾ: ಅಕ್ರಮವಾಗಿ ಮರದ ನಾಟಾವನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಚಂದಾವರದ ಮಾಸ್ತಿಮನೆ ಬಳಿ ಭರಣಿ ಮರದ ನಾಟಾಗಳನ್ನು ಓಮಿನಿಯಲ್ಲಿ ಸಾಗಿಸುತ್ತಿರುವಾಗ ಅರಣ್ಯ ಇಲಾಖೆ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ವಾಹನ ಸಮೇತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ಮಾರು ಗೌಡ ಹಾಗೂ ಶಶಿಧರ ನಾಯ್ಕ ಎನ್ನುವವರನ್ನ ಬಂಧಿಸಿದ್ದು, ಮಂಜುನಾಥ ನಾಯ್ಕ ಹಾಗೂ ರಾಮ ನಾಯ್ಕ ಎನ್ನುವವರು ಪರಾರಿಯಾಗಿದ್ದಾರೆ. ಬಂಧಿತರಿoದ ವಶಪಡಿಸಿಕೊಂಡ ಮರದ ಮೌಲ್ಯ ಸುಮಾರು ಹದಿನೈದು ಸಾವಿರಕ್ಕೂ ಅಧಿಕವಾಗಿದ್ದು, ಚಂದಾವರ ಸಮೀಪದ ಕಾಡಿನಲ್ಲಿ ಭರಣಿ ಮರವನ್ನ ಕತ್ತರಿಸಿ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ. ಹೊನ್ನಾವರ ಡಿಎಫ್‌ಓ ಕೆ.ಗಣಪತಿ, ಆರ್‌ಎಫ್‌ಓ ಪ್ರವೀಣ ಆರ್.ನಾಯಕ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ತಪ್ಪಿಸಿಕೊಂಡ ಇಬ್ಬರು ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top