ಯಲ್ಲಾಪುರ: ತೆಂಗಿನಮರವೊಂದು ಬಿದ್ದು ಎರಡು ಮನೆಗಳಿಗೆ ಹಾನಿಯಾದ ಘಟನೆ ತಾಲೂಕಿನ ಹಿತ್ಲಳ್ಳಿ ಗ್ರಾ.ಪಂ ವ್ಯಾಪ್ತಿಯ ಹಿರೇಸರದಲ್ಲಿ ನಡೆದಿದೆ.
ಹಿರೇಸರದ ನಾಗೇಂದ್ರ ಸುಬ್ರಾಯ ಹೆಗಡೆ ಹಾಗೂ ಚಂದ್ರಶೇಖರ ಭಟ್ಟ ಇವರ ಮನೆ ಮೇಲೆ ತೆಂಗಿನಮರ ಬಿದ್ದು ಮನೆಯ ಮೇಲ್ಛಾವಣಿ ಜಖಂಗೊಂಡಿದೆ. ಹೆಂಚುಗಳು ಒಡೆದಿದ್ದು, ಗೋಡೆಗೂ ಹಾನಿಯಾಗಿದೆ.
ಗ್ರಾ.ಪಂ ಅಧ್ಯಕ್ಷ ಪ್ರಸನ್ನ ಭಟ್ಟ, ಸದಸ್ಯ ಸತ್ಯನಾರಾಯಣ ಹೆಗಡೆ, ಅಭಿವೃದ್ಧಿ ಅಧಿಕಾರಿ ಜಿ. ಜಿ. ಶೆಟ್ಟಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.