ಸಿದ್ದಾಪುರ: ಅನಂತ ಯಕ್ಷ ಕಲಾ ಪ್ರತಿಷ್ಠಾನ ಮತ್ತು ಹಿತೈಷಿಗಳಿಂದ ಇತ್ತೀಚಿಗೆ ನಿಧನರಾದ ಯಕ್ಷಗಾನ ಕಲಾ ಪೋಷಕರಾದ ಅಕ್ಷರ ಹೆಗಡೆ ಅವರ ಆತ್ಮಕ್ಕೆ ಶಾಂತಿಕೋರಿ ಪಟ್ಟಣದ ಬಾಲ ಭವನದಲ್ಲಿ ನುಡಿನಮನ ಸಲ್ಲಿಸಿದರು.
ಒಂದು ನಿಮಿಷದ ಮೌನಾಚರಣೆ ಮಾಡಿ ಆತ್ಮಕ್ಕೆ ಶಾಂತಿ ಕೋರಿ ನುಡಿ ನಮನ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಪ್ರಮುಖರಾದ ಆರ್ ಎಂ ಹೆಗಡೆ ಬಾಳೇಸರ, ರವಿ ಹೆಗಡೆ ಹೂವಿನಮನೆ,ಸಿ ಎಸ್ ಗೌಡರ, ರಮೇಶ್ ಹಾರ್ಸಿ ಮನೆ, ಕೇಶವ ಹೆಗಡೆ ಕೊಳಗಿ, ಮಾಧವ ಭಟ್ಟ ಸೇರಿದಂತೆ ಪ್ರಮುಖರು ನುಡಿ ನಮನ ಸಲ್ಲಿಸಿದರು.