• Slide
    Slide
    Slide
    previous arrow
    next arrow
  • ಜ.31 ರಿಂದ ನೈಟ್​ ಕರ್ಫ್ಯೂ ರದ್ದು ; ಕೆಲ ಮಾರ್ಗಸೂಚಿಯಲ್ಲಿ ಬದಲಾವಣೆ

    300x250 AD

    ಬೆಂಗಳೂರು: ಸಿಎಂ ನೇತೃತ್ವದಲ್ಲಿ ಇಂದು ಕೋವಿಡ್ ಉನ್ನತ ಮಟ್ಟದ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ನೈಟ್​ ಕರ್ಫ್ಯೂ ರದ್ದು ಮಾಡಲು ನಿರ್ಧರಿಸಲಾಗಿದೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಸಚಿವ ಆರ್ ಅಶೋಕ್, ಬಿ.ಸಿ ನಾಗೇಶ್, ಬಿ.ಸಿ ಪಾಟೀಲ್, ಆನಂದ್ ಸಿಂಗ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಸೇರಿ ಪ್ರಮುಖರು ಭಾಗವಹಿಸಿದ್ದರು.

    ಸಭೆಯ ನಂತರ ಮಾತನಾಡಿದ ಸಚಿವ ಆರ್​. ಅಶೋಕ್ ಜನವರಿ 31 ರಿಂದ ನೈಟ್ ಕರ್ಫ್ಯೂ ತೆರವು ಮಾಡಲಾಗುತ್ತದೆ ಎಂದು ತಿಳಿಸಿದ್ಧಾರೆ. ಅಲ್ಲದೇ ಸಭೆಯಲ್ಲಿ ಹೋಟೆಲ್ ಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಲು ತೀರ್ಮಾನಿಸಲಾಗಿದ್ದು, ಸಿನಿಮಾ ಹಾಲ್​ಗಳನ್ನು 50:50 ರಷ್ಟು ಮುಂದುವರಿಸಲು, ಮದುವೆಗೆ 200 ಬದಲು 300 ಜನರು ಭಾಗವಹಿಸಲು ಅನುಮತಿ ನೀಡಲಾಗಿದೆ.

    ಇನ್ನು ದೇವಸ್ಥಾನಗಳಲ್ಲಿ ಸೇವೆ ಆರಂಭಿಸಲು ಅನುಮತಿ ನೀಡಲಾಗಿದ್ದು, ಸಾರ್ವಜನಿಕ ಸಾರಿಗೆ ವಿಚಾರದಲ್ಲಿ ಹಾಲಿ ನಿಯಮಾವಳಿ ಮುಂದುವರಿಸಲು ನಿರ್ಧರಿಸಲಾಗಿದೆ. ಹಾಗೆಯೇ ಯಾವುದೇ, ಪ್ರತಿಭಟನೆ, ಪಾದಯಾತ್ರೆಗೆ ಅವಕಾಶ ನೀಡಲಾಗುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ. ಹಾಗೆಯೇ, ಬಹುತೇಕ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಲಾಗಿಲ್ಲ.

    ಇನ್ನು ಶಿಕ್ಷಣ ಸಚಿವ ನಾಗೇಶ್ ಮಾತನಾಡಿ, ಸೋಮವಾರದಿಂದ ಎಲ್ಲ ತರಗತಿಗಳು ಆರಂಭ ಮಾಡಲಾಗುವುದು ಎಂದಿದ್ದಾರೆ. ಆಕಸ್ಮಿಕವಾಗಿ ಕ್ಲಾಸ್ ನಲ್ಲಿ ಪಾಸಿಟಿವ್ ಬಂದರೆ ತರಗತಿ ಮಾತ್ರ ಬಂದ್ ಮಾಡಲಾಗುತ್ತದೆ. ಆ ತರಗತಿಯ ಎಲ್ಲ ಮಕ್ಕಳಿಗೆ ಪರೀಕ್ಷೆ ಮಾಡಿಸಲಾಗುತ್ತದೆ, ಇಡೀ ಶಾಲೆ ಮುಚ್ಚಲ್ಲ ಎಂದಿದ್ದಾರೆ.

    ಇನ್ನು ಎಲ್ಲಾ ಶಾಲೆಗಳಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಶಾಲೆಯಲ್ಲಿ ಪಾಸಿಟಿವಿಟಿ ರೇಟ್ ಆಧಾರದ ಮೇಲೆ ಆಯಾ ಡಿಸಿ ನಿರ್ಧಾರ ಕೈಗೊಳ್ಳುತ್ತಾರೆ ಎಂದಿದ್ದಾರೆ.

    ಇನ್ನು ದೇವಾಲಯಗಳಲ್ಲಿ ಒಂದು ಸಮಯದಲ್ಲಿ ಕೇವಲ 50 ಜನ ಇರಬೇಕು ಎಂಬ ನಿಯಮವನ್ನು ಮುಂದುವರಿಸಲು ನಿರ್ಧರಿಸಲಾಗಿದ್ದು, ಜಾತ್ರೆ, ಉತ್ಸವ, ರ್ಯಾಲಿ, ಧರಣಿಗಳ ಮೇಲೆ ನಿರ್ಬಂಧ ಮುಂದುವರಿಸಲಾಗಿದೆ.

    ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಧಾರಗಳು

    ಹೋಟೆಲ್, ಬಾರ್, ಕ್ಲಬ್ ಪೂರ್ಣ ಪ್ರಮಾಣದಲ್ಲಿ ಓಪನ್

    ಜಾತ್ರೆ, ಮಹೋತ್ಸವ, ಮೆರವಣಿಗೆ ಹಿಂದಿನಂತೆ ನಿಷೇಧ ಮುಂದುವರಿಕೆ

    ಕ್ರೀಡೆ 50:50 ಮುಂದುವರಿಕೆ, ಸ್ಟೆಡಿಯಂನಲ್ಲಿ 50:50 ಮುಂದುವರಿಕೆ

    ಸ್ವಿಮ್ಮಿಂಗ್ ಪೂಲ್ 50:50 ಮುಂದುವರಿಕೆ

    300x250 AD

    ಜನವರಿ 31 ರಿಂದ ರಾತ್ರಿ ಕರ್ಫ್ಯೂ ರದ್ದು

    ಬೆಂಗಳೂರು ನಗರದಲ್ಲಿ ಜನವರಿ 31 ರಿಂದ ಶಾಲೆ, ಕಾಲೇಜುಗಳು ಓಪನ್

    ಮೆಟ್ರೋ ರೈಲು ಸೇರಿದಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳು ತಮ್ಮ ಆಸನ ಸಾಮರ್ಥ್ಯದಷ್ಟೇ ಪ್ರಯಾಣಿಕರೊಂದಿಗೆ ಕಾರ್ಯಾಚರಣೆ ನಡೆಸಬಹುದು.

    ವಿವಾಹ ಸಮಾರಂಭಗಳಿಗೆ ತೆರೆದ ಸ್ಥಳದಲ್ಲಿ 300 ಜನರಿಗೆ ಹಾಗೂ ಮುಚ್ಚಿದ ಸ್ಥಳಗಳಲ್ಲಿ 200 ಜನರಿಗೆ ಅವಕಾಶ.

    ಸರ್ಕಾರದ ಸಚಿವಾಲಯದಲ್ಲಿ ಶೇ. ನೂರರಷ್ಟು ಸಿಬ್ಬಂದಿ ಕಾರ್ಯನಿರ್ವಹಿಸಬಹುದು.

    ಧಾರ್ಮಿಕ ಸ್ಥಳಗಳಲ್ಲಿ ದರ್ಶನ ಹಾಗೂ ಸೇವೆಗೆ ಅವಕಾಶ ನೀಡಲಾಗುವುದು. ಶೇ. 50ರ ಸಾಮರ್ಥ್ಯದಲ್ಲಿ ಪ್ರವೇಶಾವಕಾಶ ಕಲ್ಪಿಸಲಾಗುವುದು.

    ಕೇರಳ, ಮಹಾರಾಷ್ಟ್ರ, ಗೋವಾ ಗಡಿಗಳಲ್ಲಿ ತೀವ್ರ ನಿಗಾ ವಹಿಸಲು ಸೂಚಿಸಲಾಗಿದೆ

    ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಶೇ. 25 ರಷ್ಟು ಹಾಸಿಗೆಗಳನ್ನು ನಿಗದಿಪಡಿಸಲು ನಿರ್ಧರಿಸಲಾಗಿದೆ

    ಕೋವಿಡ್ ಹೊರತು ಪಡಿಸಿ, ಇತರ ಚಿಕಿತ್ಸೆಗಳನ್ನು ಸಮರ್ಪಕವಾಗಿ ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.
    ಇನ್ನು ತಜ್ಞರ ವರದಿ ಆಧಾರದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ರಿಕವರಿ ರೇಟ್ ಹೆಚ್ಚಾಗಿದೆ. ಆದರೆ, ಸೋಂಕಿನ ತೀವ್ರತೆ ಹೆಚ್ಚಿಲ್ಲ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕೂಡ ಕಡಿಮೆಯಿದೆ. ಗುಣಮುಖರಾಗುತ್ತಿರುವವರ ಪ್ರಮಾಣ ಹೆಚ್ಚಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಶೇ. 2ಕ್ಕೆ ಇಳಿದಿದೆ ಎಂದು ಆರ್​. ಅಶೋಕ್ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top