ಸಿರಸಿ: ತಾಲೂಕಿನ ದಾಸನಕೊಪ್ಪ ವಲಯ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರದ ನಿವೃತ್ತಿ ಹೊಂದಿದ ಅಂಗನವಾಡಿ ಸಹಾಯಕಿಯರಿಗೆ ಜ.28ರಂದು ಬದನಗೊಡ ಗ್ರಾಂ ಪಂಚಾಯತ್ ಸಭಾಭವನದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಡಿಪಿಓ ದತ್ತಾತ್ರೇಯ ಭಟ್ಟ ಮತ್ತು ಎಲ್ಲಾ ವಲಯದ ಮೇಲ್ವಿಚಾರಕರು ಹಾಗೂ ಸಿಬ್ಬಂದಿಗಳು ಹಾಗೂ ದಾಸನಕೊಪ್ಪ ವಲಯದ ಮೇಲ್ವಿಚಾರಕರಾಗಿರುವ ಅಖಿಲಾ.ಡಿ.ಜನ್ನು , ಬದನಗೊಡ ಗ್ರಾಂ ಪಂಚಾಯತ್ ಅಧ್ಯಕ್ಷರು ಗೀತಾ.ಆಲೂರ,ಉಪಾಧ್ಯಕ್ಷರು ಭದ್ರ.ಬಿ.ಗೌಡ, ಪಿಡಿಓ ಜಯಲಕ್ಷ್ಮಿ.ಬಿ.ಮತ್ತು ಸಿಬ್ಬಂದಿಗಳು ಮತ್ತು ವಲಯದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಭಾಗವಹಿಸಿದರು. ಅಖಿಲಾ. ಡಿ.ಜನ್ನು ಕಾರ್ಯಕ್ರಮದ ನಿರೂಪಣೆ ಮಾಡಿದರು. ನಾಗರತ್ನ ಪ್ರಾರ್ಥಿಸಿದರು.