ಶಿರಸಿ: ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಕೊಟ್ಟಿಗೆ ಸುಟ್ಟು ಸುಮಾರು 2 ಲಕ್ಷ ರೂ ಹಾನಿಯಾದ ಘಟನೆ ತಾಲೂಕಿನ ಕೊಡಗದ್ದೆ ಗಾ.ಪಂ ವ್ಯಾಪ್ತಿಯ ಸೊಣಗಿನಮನೆ ಗ್ರಾಮದಲ್ಲಿ ನಡೆದಿದೆ.
ಶರಾವತಿ ಸುಬ್ಬ ನಾಯ್ಕ ಗದ್ದೆಹಳ್ಳಿ ಎನ್ನುವವರ ಮನೆಯ ಕೊಟ್ಟಿಗೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಕೊಟ್ಟಿಗೆ ಪಕ್ಕವೇ ಇದ್ದ ಬಚ್ಚಲುಮನೆ, ಕೊಟ್ಟಿಗೆಯ ಮೇಲಿದ್ದ ಹುಲ್ಲು, ಮೇವು, ಸೇರಿದಂತೆ ಕೃಷಿ ಪರಿಕರಗಳು ಸಂಪೂರ್ಣವಾಗಿ ಸುಟ್ಟುಹೋಗಿದೆ. ಊರ ಸುತ್ತಮುತ್ತಲಿನ ಜನರ ಸಹಾರದಿಂದ ಅವರು ಉಳಿದುಕೊಂಡಿದ್ದ ಮನೆಗೆ ಬೆಂಕಿ ತಗುಲದಂತೆ ಸಂರಕ್ಷಿಸಲಾಗಿದೆ.