
ಜೊಯಿಡಾ: ಕೊರೊನಾ ಎರಡನೆ ಅಲೆ ಹೋಗಿ ಮೂರನೆ ಅಲೆ ಬರುತ್ತಿದೆ. ಯಾವ ಮಕ್ಕಳಿಗೆ ಅಪೌಷ್ಟಿಕತೆಯಿಂದ ಶಕ್ತಿ ಇರೋದಿಲ್ಲವೋ ಅಂತಹ ಮಕ್ಕಳಿಗೆ ಈ ರೋಗ ಬಾಧೆ ಮೊದಲು ಬಾಧಿಸಬಹುದು. ಈ ಬಗ್ಗೆ ತಾಯಂದಿರಲ್ಲಿ ಮೊದಲು ಜಾಗ್ರತಿ ಮೂಡಬೇಕು. ಮೂರು ತಿಂಗಳ ಮಕ್ಕಳನ್ನು ಹೊರಗೆ ಬಿಡದೆ ಮನೆಯಲ್ಲೆ ಜೊಪಾನ ಮಾಡಿಕೊಂಡರೆ ಈ ಕರೊನಾದಿಂದ ಗೆಲ್ಲಬಹುದು ಎಂದು ಚಿಕ್ಕ ಮಕ್ಕಳ ತಜ್ಞ ಡಾ.ಶ್ರೀಶೈಲ ಮಾದಣ್ಣನವರ ಹೇಳಿದರು.
ಜೊಯಿಡಾ ತಾಲೂಕಾ ಆಸ್ಪತ್ರೆಯಲ್ಲಿ ಸೋಮವಾರ ವಿ ಆರ್ ದೇಶಪಾಂಡೆ ಮೇಮೊರಿಯಲ್ ಟ್ರಸ್ಟ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಅಪೌಷ್ಟಿಕ ಮಕ್ಕಳ ಉಚಿತ ತಪಾಸಣಾ ಶಿಬಿರ ಹಾಗೂ ಪೌಷ್ಟಿಕ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ನಂತರ ಡಾ ಶ್ರೀಶೈಲ ಮಾದಣ್ಣನವರ ಮತ್ತು ಇವರ ವೈದ್ಯರ ತಂಡದಿಂದ 140 ಕ್ಕೂ ಹೆಚ್ಚು ಮಕ್ಕಳ ಆರೋಗ್ಯ ತಪಾಸಣೆ ನಡೆಸಿ 316 ಮಕ್ಕಳಿಗೆ ಪೌಷ್ಟಿಕ ಕಿಟ್ ವಿತರಣೆ ಮಾಡಲಾಯಿತು.