ಅಂಕೋಲಾ : ಕಳೆದ 3 ದಿನಗಳ ಕಾಲ ನಡೆದ ಗಣರಾಜ್ಯೋತ್ಸವ ಸೌಹಾರ್ದಯುತ ಕ್ರಿಕೆಟ ಪಂದ್ಯದಲ್ಲಿ ಹೆಸ್ಕಾಂ ಇಲಾಖೆ ಚಾಂಪಿಯನ್ ಆಗಿ ಹೊರಹೊಮ್ಮಿತು.ಪೊಲೀಸ್ಇಲಾಖೆ ರನ್ನರ್ಸ್ ಅಪ್ ಗೌರವನ್ನು ತನ್ನದಾಗಿಸಿಕೊಂಡಿತು.
ಹೆಸ್ಕಾಂ ಇಲಾಖೆಯ ಸಂತೋಷ್ ಬೆಸ್ಟ್ ಬ್ಯಾಟ್ಸ್ ಮನ್ ಆಗಿಯು ಇಲಾಖೆಯ ಮಲಾಲಿ ಬೆಸ್ಟ್ ಬೌಲರ್ ಆಗಿಯೂ, ಹೆಸ್ಕಾಂ ಇಲಾಖೆಯ ಗಜವದನ ಪಂದ್ಯಶ್ರೇಷ್ಠನಾಗಿಯೂ ಪೆÇಲೀಸ್ ಇಲಾಖೆಯ ಮಂಜುನಾಥ ಲಕ್ಮಾಪುರ್ ಸರಣಿಶ್ರೇಷ್ಠನಾಗಿಯೂ ಇಲಾಖೆಯ ಆಸಿಫ್ ಕುಂಕುರ್ ಬೆಸ್ಟ್ ಕ್ಯಾಚರ್ ಆಗಿಯೂ ಪಾರಿತೋಷಕಗಳನ್ನು ಪಡೆದುಕೊಂಡರು.
ಕ್ರೀಡೆಗೆ ವಿಶೇಷವಾಗಿ ಸಹಕಾರ ನೀಡುತ್ತಿರುವ ತಾಲೂಕಿನ ಕ್ರೀಡಾಭಿಮಾನಿ ಮಂಜುನಾಥ್ ನಾಯ್ಕರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕ್ರಿಕೆಟ್ ಪಂದ್ಯಾವಳಿಯ ಬಹುಮಾನ ವಿತರಣೆ ಮಾಡಿ ಮಾತನಾಡಿದ ತಹಸಿಲ್ದಾರ ಉದಯಕುಂಬಾರ ಪಂದ್ಯಾವಳಿಗಳು ಸೌಹಾರ್ದತೆಗೆ ಸಾಕ್ಷಿಯಾಗಬೇಕು.ಇಂತಹ ಸೌಹಾರ್ದತೆಯನ್ನು ಗಣರಾಜ್ಯೋತ್ಸವ ಕಪ್ 2022 ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ ಮಾದರಿ ಕಾರ್ಯವನ್ನು ಹಮ್ಮಿಕೊಳ್ಳುವುದರ ಜೊತೆಗೆ ರಾಷ್ಟ್ರಾಭಿಮಾನವನ್ನು ಸಾದರಪಡಿಸಿದೆ. ಕಳೆದ ಮೂರು ದಿನಗಳಿಂದ ನಿಯಮವನ್ನು ಪಾಲಿಸಿ ಎಲ್ಲಿಯೂ ತೊಂದರೆಯಾಗದ ಹಾಗೆ ಯಶಸ್ವಿಯಾಗಿ ತಾಲೂಕಿನ ಪ್ರತಿಯೊಬ್ಬರನ್ನು ಕೂಡಿಸಿಕೊಂಡು ಸಂಘಟನಾತ್ಮಕವಾಗಿ ಪಂದ್ಯಾವಳಿಯನ್ನು ನಡೆಸಿ ಉತ್ತಮ ಕಾರ್ಯ ಮಾಡಿದ್ದಾರೆ ಎಂದರು.
ಜಿಪ ಮಾಜಿ ಅಧ್ಯಕ್ಷ ರಮಾನಂದ ನಾಯಕ ಮಾತನಾಡಿ ಇಂತಹ ಪಂದ್ಯಾವಳಿಗಳು ಕೇವಲ ಕ್ರೀಡೆಯನ್ನಷ್ಟೇ ಅಭಿವೃದ್ಧಿ ಪಡಿಸುವುದಿಲ್ಲ. ಎಲ್ಲರೂ ಜೊತೆಯಾಗಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಇಂತಹ ಸೌಹಾರ್ದಯುತ ಪಂದ್ಯಾವಳಿಗಳು ಸಾಕ್ಷಿಯಾಗುತ್ತವೆ. ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಘು ಕಾಕರಮಠ ಅವರ ಈ ವಿಶೇಷ ಕಲ್ಪನೆಯಲ್ಲಿ ಇಷ್ಟು ಅರ್ಥಪೂರ್ಣವಾಗಿ ಜೈಹಿಂದ್ ಮೈದಾನ ಕ್ರೀಡಾ ಪ್ರೇಮಕ್ಕೆ ಸಾಕ್ಷಿಯಾಗಿದೆ ಎಂದರು.
ಪತ್ರಕರ್ತ ವಿಠಲದಾಸ್ ಕಾಮತ್ ಅಧ್ಯಕ್ಷತೆವಹಿಸಿ ಮಾತನಾಡಿ ಕೋವಿಡ್ ಬಾಧಿಸಿದ ಸನ್ನಿವೇಶದ ನಡುವೆಯೂ ದಿನದ 24 ಗಂಟೆಗಳ ಕಾಲ ದುಡಿಯುತ್ತಿರುವ ಎಲ್ಲರಿಗೂ ಮಾನಸಿಕ ನೆಮ್ಮದಿ ದೊರೆಯಲೆಂದು ಪಂದ್ಯಾವಳಿಯನ್ನು ನಮ್ಮ ಸಂಘದ ಅಧ್ಯಕ್ಷ ರಾಘು ಕಾಕರ್ಮಠ ಆಯೋಜಿಸಿದ್ದು ತಾಲೂಕಿನ ಸರ್ವರ ಸಹಕಾರ ದೊರೆತಿರುವುದು ಹೆಮ್ಮೆ .ಇದೇ ರೀತಿ ಸಹಕಾರ ದೊರೆತಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಪಂದ್ಯಾವಳಿಯನ್ನು ಇದೇ ಮೈದಾನದಲ್ಲಿ ಹಮ್ಮಿಕೊಳ್ಳೋಣ ಎಂದರು.
ಪುರಸಭೆಯ ಅಧ್ಯಕ್ಷೆ ಶಾಂತಲಾ ನಾಡ್ಕರ್ಣಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಪಿವೈ ಸಾವಂತ್, ವೇದಿಕೆಯಲ್ಲಿ ಬಹುಮಾನದ ಪ್ರಾಯೋಜಕತ್ವವನ್ನು ವಹಿಸಿಕೊಂಡ ಅಂಕೋಲಾ ಪೌಂಡೇಶನ್ ಅಧ್ಯಕ್ಷ ಡಾ ಮತಿನ್ ಶೇಖ್, ಕೆಎಲ್‍ಇ ಬಿಎಡ್ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಹೆಗಡೆ , ಹೆಸ್ಕಾಂಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರವೀಣ್ ನಾಯ್ಕ್, ಪಿಎಸ್‍ಐ ಪ್ರವೀಣ್ ಕುಮಾರ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಘು ಕಾಕರಮಠ ಉಪಸ್ಥಿತರಿದ್ದರು.
ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸುಭಾಷ್ ಕಾರೇಬೈಲ್ ಸ್ವಾಗತಿಸಿದರು, ಸಹಕಾರ್ಯದರ್ಶಿ ಅರುಣ ಶೆಟ್ಟಿ ನಿರ್ವಹಿಸಿದರು. ಸದಸ್ಯ ಅಕ್ಷಯ ನಾಯ್ಕ್ ವಂದಿಸಿದರು.