
ಶಿರಸಿ: ಸೂರ್ಯನಾರಾಯಣ ಪ್ರೌಢ ಶಾಲೆ ಬಿಸಲಕೊಪ್ಪದಲ್ಲಿ ಇತ್ತೀಚೆಗೆ ಮಕ್ಕಳ ಕಲಿಕಾವನಕ್ಕೆ ಅಡಿಗಲ್ಲು ಸಮಾರಂಭ ನಡೆಯಿತು.
ಖ್ಯಾತ ಮಕ್ಕಳ ತಜ್ಞ ದಿನೇಶ ಹೆಗಡೆ 3d plan ಉದ್ಘಾಟಿಸಿ ಮಾತನಾಡಿ ಇದು ಇಡಿ ತಾಲೂಕಿಗೆ ಮಾದರಿಯಾಗಲಿ ಎಂದರು. ಅಲ್ಲದೆ ಇಲ್ಲಿ ವಿವಿಧ ಸಸ್ಯ ವನ ವಿಜ್ಞಾನ, ಗಣಿತ ಪಾರ್ಕ್ ನಿರ್ಮಾಣ ಮಾಡುವ ಉದ್ದೇಶ ಅಪರೂಪವಾದ ಕೆಲಸ ಎಂದರು.
ಬಿಸಲಕೊಪ್ಪ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಘವೇಂದ್ರ ನಾಯ್ಕ ಅಡಿಗಲ್ಲು ಇಟ್ಟು ಇಂತಹ ಕಾರ್ಯಕ್ರಮಕ್ಕೆ ನಮ್ಮ ಸಹಕಾರ ಸದಾ ಇದೆ ಎಂದರು. ಮುಖ್ಯೋಪಾಧ್ಯಾಯ ಗಣೇಶ ಭಟ್ಟ ಎಲ್ಲರನ್ನೂ ಸ್ವಾಗತಿಸಿ ಹೊಸ ಯೋಚನೆ- ಯೋಜನೆ ನಮ್ಮದಾಗಿದ್ದು, ನಮ್ಮ ಶಾಲೆಯ 10 ಎಕರೆ ಜಾಗದಲ್ಲಿ ಅಡಿಕೆ ತೋಟ ಹಾಗು ಕಲಿಕಾ ವನದ ನಿರ್ಮಾಣದ ಕನಸಿಗೆ ನಮ್ಮ ಆಡಳಿತ ಮಂಡಳಿ ಪೆÇ್ರೀತ್ಸಾಹ ನೀಡುತ್ತಿದೆ ಎಂದರು. ಸಾಮಾಜಿಕ ಅರಣ್ಯ ಇಲಾಖೆಯ ಆರ್‍ಎಫ್‍ಓ ಸಸಿ ನೆಟ್ಟು ಶುಭ ಹಾರೈಸಿದರು. ಶಿಕ್ಷಕ ಗಣೇಶ್ ಹೆಗಡೆ ಈ ವನದ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡು ವನದ ವಿವರ ನೀಡಿದರು. ಸಂಸ್ಥೆಯ ಅಧ್ಯಕ್ಷ ಎಸ್. ಎಂ ಹೆಗಡೆ ಹೂಡೆಲಕೂಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ಶ್ರೀಧರ ನಾಯಕ, ಕಾರ್ಯದರ್ಶಿ ಜಿ. ವಿ. ಹೆಗಡೆ, ಉಪಸ್ಥಿತರಿದ್ದರು. ಶಿಕ್ಷಕ ಲೋಕನಾಥ್ ನಿರ್ವಹಿಸಿ ವಂದಿಸಿದರು