ಭಟ್ಕಳ: ತಾಲೂಕಿನ ಮುಂಡಳ್ಳಿಯಲ್ಲಿ ದುರ್ಗಾಪರಮೇಶ್ವರಿ ಪರಿವಾರದ ದೇವರಾದ ಸೀಗೆ ಹನುಮಂತ ದೇವಸ್ಥಾನದ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವನ್ನು ಶ್ರೀರಾಮ ಕ್ಷೇತ್ರದ ಮಠಾಧೀಶರಾದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ನೆರವೇರಿಸಿದರು.
ಈ ಸಂದರ್ಭದಲ್ಲಿ ದೇವಸ್ತಾನದ ಆಡಳಿತ ಮಂಡಳಿಯ ಅದ್ಯಕ್ಷ ಹೇಮಂತ ಮೊಗೇರ, ದಿನೇಶ ನಾಯ್ಕ, ರಾಜು ನಾಯ್ಕ, ಮಂಜಯ್ಯ ಮೊಗೇರ, ಪ್ರಧಾನ ಅರ್ಚಕ ನಾಗರಾಜ ಭಟ್, ರಾಜೇಶ ನಾಯ್ಕ, ಹಾಗೂ ಇತರರರು ಉಪಸ್ಥಿತರಿದ್ದರು.