ಅಂಕೋಲಾ : ಇಲ್ಲಿನ ಬಾಸಗೋಡದ ಸ್ವಾತಂತ್ರ್ಯ ಯೋಧ ದಿ. ರಾಮಕೃಷ್ಣ ಪುರ್ಸು ನಾಯಕ ಇವರ ಪುತ್ರ ನೀಲಕಂಠ ರಾಮಕೃಷ್ಣ ನಾಯಕ(78) ಗುರುವಾರ ಬೆಳಗಿನ ಜಾವ ಸೃಗೃಹದಲ್ಲಿ ವಿಧಿವಶರಾದರು. ಉತ್ತಮ ಕೃಷಿಕರಾಗಿ, ಪೊಲೀಸ್ ದಳಪತಿಯಾಗಿ, ಸುಭೋದ ಯಕ್ಷಗಾನ ಮಂಡಳಿಯ ಹೆಸರಾಂತ ಕಲಾವಿದರಾಗಿ, ಸಹಕಾರಿ ಮತ್ತು ರಾಜಕೀಯ ಕ್ಷೇತ್ರದಲ್ಲಿಯೂ ತನ್ನದೇ ಆದ ಛಾಪು ಮೂಡಿಸಿದ್ದರು. ಶ್ರೀ ಕೊಗ್ರೆ ಬೊಮ್ಮಯ್ಯ ದೇವರ ಕಟ್ಟಿಗೆದಾರರಾಗಿ, ಶ್ರೀ ಜೈನರಾಕೇಶ್ವರ ಮತ್ತಿತರ ಪರಿವಾರ ದೇವತೆಗಳ ಪೂಜಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಬಾಸಗೋಡ ಹಾಗೂ ಸುತ್ತಮುತ್ತಲಿನ ಅನೇಕ ಹಳ್ಳಿಗಳ ಶೈಕ್ಷಣಿಕ ,ಧಾರ್ಮಿಕ, ಕ್ರೀಡೆ ಹಾಗೂ ಸಾಮಾಜಿಕ ಕಾರ್ಯಗಳಿಗೆ ಸಹಾಯ ಸಹಕಾರ ಮಾರ್ಗದರ್ಶನ ನೀಡುತ್ತಿದ್ದರು. ಮೃತರು,ಪತ್ನಿ ಲೀಲಾವತಿ, ಮಕ್ಕಳಾದ ಉದಯ, ಪ್ರಕಾಶ, ದೀಪಕ, ಕಿರಣ, ಗುರುಪ್ರಸಾದ, ಸೊಸೆಯಂದಿರು, ಮೊಮ್ಮಕ್ಕಳು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಯಕ್ಷಗಾನ ಕಲಾವಿದ ನೀಲಕಂಠ ನಾಯಕ ವಿಧಿವಶ
