ಹೊನ್ನಾವರ : ತಾಲೂಕಿನ ಕರ್ಕಿಯಲ್ಲಿ ಧರ್ಮಸ್ಥಳ ಯೋಜನೆ ನಡೆಸುವ ಡಿಜಿಟಲ್ ಸೇವಾ ಕೇಂದ್ರವನ್ನು ತಾಲೂಕಾ ಪಂಚಾಯತ ಮಾಜಿ ಸದಸ್ಯ ತುಕಾರಾಮ ನಾಯ್ಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಡಾ.ವೀರೇಂದ್ರ ಹೆಗ್ಗಡೆಯವರು ಮನುಕುಲದ ಉದ್ದಾರಕ್ಕೆ ಬಂದು ದೈವೀಪುರುಷರು, ಸಮಾಜದ ಕುಂದುಕೊರತೆಗಳನ್ನು ಗುರುತಿಸಿ ಸೂಕ್ತ ಯೋಜನೆಗಳನ್ನು ರೂಪಿಸಿ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪಾರದರ್ಶಕವಾಗಿ ಅನುಷ್ಟಾನ ಮಾಡುತ್ತಿದ್ದು, ಸಮಾಜದ ಪ್ರತಿಯೊಬ್ಬರೂ ಇದನ್ನು ಸದ್ಬಳಕೆ ಮಾಡಿಕೊಂಡು ಧನ್ಯತಾಭಾವದೊಂದಿಗೆ ಸ್ವಾವಲಂಬಿ ಜೀವನ ನಡೆಸಿರಿ ಎಂದರು.
ತಾಲೂಕು ಯೋಜನಾಧಿಕಾರಿ ವಾಸಂತಿ ಅಮೀನ್ ಪ್ರಾಸ್ತಾವಿಕ ಮಾತನಾಡಿ ಯೋಜನೆಯ ಸೇವಾಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ರಾಜ್ಯಾದ್ಯಂತ ಡಿಜಿಟಲ್ ಸೇವಾಕೇಂದ್ರದ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರದ 720 ಕ್ಕೂ ಅಧಿಕ ಸೇವೆಗಳನ್ನು ನೀಡುವ ಯೋಚನೆಯೊಂದಿಗೆ ಪ್ರಸ್ತುತ ಸಂಪೂರ್ಣ ಉಚಿತವಾಗಿ ಸಾರ್ವಜನಿಕರಿಗೆ ಈ ಶ್ರಮ ಕಾರ್ಡ ಮಾಡಿಸಿಕೊಡುತ್ತಿದ್ದು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕರ್ಕಿ ಗ್ರಾ.ಪಂ ಸದಸ್ಯರಾದ ವಿಜಯಲಕ್ಷ್ಮಿ ಭಟ್ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಶುಭಹಾರೈಸಿದರು.
ಕರ್ಕಿ ಮಹಿಳಾ ಮಂಡಳದ ಅಧ್ಯಕ್ಷೆ ಅಹಲ್ಯಾ ಹೆಬ್ಬಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸರ್ಕಾರದ ಜನಪರ ಯೋಜನೆಯನ್ನು ಗ್ರಾಮ ಮಟ್ಟದಲ್ಲಿ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆ ಡಿಜಿಟಲ್ ಸೇವಾ ಕೇಂದ್ರದ ಮೂಲಕ ಸಾಕಾರಗೊಳಿಸುತ್ತಿದ್ದು ಅಭಿನಂದನೀಯ ವಿಷಯವಾಗಿದೆ.ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳುವ ಮೂಲಕ ಹೆಗ್ಗಡೆಯವರ ಸೇವಾಕಾರ್ಯದಲ್ಲಿ ಭಾಗಿಯಾಗೋಣ ಎಂದರು.
ಆಯ್ದ ಸದಸ್ಯರಿಗೆ ಸ್ಥಳದಲ್ಲೇ ನೊಂದಾಯಿಸಿ ಈ ಶ್ರಮ್ ಕಾರ್ಡ್ ದಾಖಲಾತಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿ ಉಮೇಶ್ ,ಹೊನ್ನಾವರ ವಲಯ ಮೇಲ್ವಿಚಾರಕ ನಾಗರಾಜ್.ಕೆ,ಸೇವಾಪ್ರತಿನಿಧಿಗಳಾದ ಜಯಲಲಿತಾ,ದೀಪಾ,ಡಾಟಾ ಆಪರೇಟರ್ ನಯನಾ ಒಕ್ಕೂಟದ ಪದಾಧಿಕಾರಿಗಳು,ಪಾಲುದಾರರು ಪಾಲ್ಗೊಂಡಿದ್ದರು.