ಮುಂಡಗೋಡ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮುಂಡಗೋಡದ ಕಾರ್ಯಕ್ಷೇತ್ರದಲ್ಲಿ ಗುರುವಾರ ಸಿ.ಎಸ್.ಸಿ ಸೆಂಟರ್ ತೆರೆಯಲಾಯಿತು.
ಪ.ಪಂ ಅಧ್ಯಕ್ಷೆ ರೇಣುಕಾ ರವಿ ಹಾವೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಯೋಜನೆಯ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪ.ಪಂ ಸದಸ್ಯರಾದ ಶ್ರೀಕಾಂತ ಸಾನು, ಸುವರ್ಣ ಕೊಟಗೊಣಸಿ, ಯಲ್ಲಾಪುರ ಮತ್ತು ಮುಂಡಗೋಡ ಯೋಜನಾಧಿಕಾರಿ ಹನಮಂತ ನಾಯ್ಕ, ಸುಧಾ, ಸಾನಿಯಾ ಮತ್ತು ಒಕ್ಕೂಟ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು. ರಮೇಶ ನಾಯ್ಕ ನಿರೂಪಿಸಿದರು, ಲಕ್ಷ್ಮಿ ಎಂ ಸ್ವಾಗಿತಿಸಿದರು, ಮಂಜುಳಾ ವಂದನಾರ್ಪಣೆ ಮಾಡಿದರು.