• Slide
  Slide
  Slide
  previous arrow
  next arrow
 • ವೈಟಿಎಸ್‍ಎಸ್ ಸಾಧಕ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ

  300x250 AD
  ಶಿಕ್ಷಕರೊಂದಿಗೆ ಸಾಧಕ ವಿದ್ಯಾರ್ಥಿಗಳು

  ಯಲ್ಲಾಪುರ: ಪಟ್ಟಣದ ಪ್ರತಿಷ್ಟಿತ ವೈಟಿಎಸ್‍ಎಸ್ ಶಿಕ್ಷಣ ಸಂಸ್ಥೆಯ ಪಿಯು ಕಾಲೇಜಿನ ಸಾಧಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಸೋಮವಾರ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
  ಬಾಲಕರ ವಿಭಾಗದಲ್ಲಿ ದ್ವಿತೀಯ ಪಿಯು ವಾಣಿಜ್ಯ ವಿಭಾಗದ ಜ್ಯೋತಿರಾಧಿತ್ಯ ಭಟ್, ದ್ವಿತೀಯ ಪಿಯು ವಿಜ್ಞಾನ ವಿಭಾಗದ ಆಕಾಶ ರವಿ ಭಟ್ಟ, ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಪಿಯು ವಿಜ್ಞಾನ ವಿಭಾಗದ ಸಹನಾ ಚಂದ್ರಹಾಸ ನಾಯ್ಕ ಹಾಗೂ ಕೆ.ಎನ್.ಪ್ರಜ್ಞಾಆದರ್ಶ ವಿದ್ಯಾರ್ಥಿಗಳಾ ಆಯ್ಕೆಯಾಗಿದ್ದು, ಪ್ರಶಸ್ತಿಪತ್ರ, ಬಹುಮಾನ ನೀಡಿ ಗೌರವಿಸಿದರು.
  ಕ್ರೀಡೆ ಸಾಂಸ್ಕೃತಿಕ ಹಾಗೂ ಇತರೇ ಪತ್ಯೇತರ ಚಟುವಟಿಕೆಯಲ್ಲಿ ದ್ವಿತೀಯ ಪಿಯು ವಾಣಿಜ್ಯ ವಿಭಾಗದ ಫ್ರೀಯಾನ್ ಫರ್ನಾಂಡೀಸ್ ಹಾಗೂ ದ್ವಿತೀಯ ಪಿಯು ವಿಜ್ಞಾನ ವಿಭಾಗದ ಸುದೀಪ ಮೇತ್ರಿ, ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಪಿಯು ವಾಣಿಜ್ಯ ವಿಭಾಗದ ಶ್ರದ್ಧಾ ಭಟ್ಟ ಅವರನ್ನು ಗೌರವಿಸಿದರು.
  ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ತೇಜಸ್ವಿ ಹೇಂದ್ರೆ ಆದರ್ಶ ವಿದ್ಯಾರ್ಥಿ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರತಿಜ್ಞಾ ಮರಾಠ ಮತ್ತು ಪ್ರತಿಭಾ ಮರೆ ಆದರ್ಶ ವಿದ್ಯಾರ್ಥಿನಿಯರಾಗಿ ಆಯ್ಕೆಯಾಗಿದ್ದಾರೆ. ಪ್ರೌಢಶಾಲಾ ವಿಭಾಗದ ಕ್ರೀಡೆ, ಸಾಂಸ್ಕೃತಿಕ ಹಾಗೂ ಇತರೇ ಪತ್ಯೇತರ ಚಟುವಟಿಕೆಯಲ್ಲಿ ವಿದ್ಯಾರ್ಥಿ ಸಾಧಕರಾಗಿ ಬಾಲಕರಲ್ಲಿ ರಾಮು ತಾರೆ ಹಾಗೂ ಬಾಲಕಿಯರಲ್ಲಿ ತೃಪ್ತಿ ಭಟ್ಟ ಆಯ್ಕೆಯಾಗಿದ್ದಾರೆ.
  ಪ್ರಾಂಶುಪಾಲ ಜಯರಾಮ ಗುನಗಾ ಅವರು ಆದರ್ಶ ವಿದ್ಯಾರ್ಥಿಗಳು ಹಾಗೂ ಸಾಧನೆಗೈದ ವಿದ್ಯಾರ್ಥಿಗಳನ್ನು ಪ್ರಮಾಣ ಪತ್ರ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಆನಂದ ಹೆಗಡೆ, ವಾಣಿಶ್ರೀ ಹೆಗಡೆ, ಅಶ್ವಿನಿ ಕೆ. ಪ್ರೌಢಶಾಲಾ ವಿಭಾಗದ ಮುಖ್ಯಾಧ್ಯಾಪಕರಾದ ಎಂ.ಎಸ್ ಲಮಾಣಿ, ಶಿಕ್ಷಕ ವಿನೋಧ ಭಟ್ಟ, ಎನ್ ಎಸ್ ಭಟ್ಟ, ಕೆ.ಸಿ.ಮಾಲ್ಕರ ಈ ಸಂದರ್ಭದಲ್ಲಿದ್ದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಕೋರಿದರು. ಕೋವಿಡ್ ನಿಯಮಾವಳಿಯ ಅನುಸಾರ ಸರಳ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top