ಕಾರವಾರ: ಅತಿಕ್ರಮಣ ಸಕ್ರಮ ಮಾಡಿಕೊಡುವ ಕುರಿತು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಲಿμÁ ಯಲಕಪಾಟಿ ಹಾಗೂ ಶಿರವಾಡದ ಗ್ರಾಮಸ್ಥರು ಗುರುವಾರ ವಿಧಾನ ಪರಿಷತ್ ಸದಸ್ಯರು ಗಣಪತಿ ಉಳ್ವೆಕರಗೆ ಮನವಿ ಸಲ್ಲಿಸಿದರು.
ತಾಲೂಕಿನ ಶಿರವಾಡದಲ್ಲಿ ಸುಮಾರು 35 ರಿಂದ 40 ವರ್ಷಗಳು 200 ಕ್ಕೂ ಅಧಿಕ ಕುಟುಂಬಗಳು ನಿರಾಶ್ರಿತರ ಜಾಗದಲ್ಲಿ ಹಾಗೂ ಅರಣ್ಯ ಜಾಗದಲ್ಲಿ ವಾಸ ಮಾಡುತ್ತ ಬಂದಿರುತ್ತಾರೆ. ಅತಿಕ್ರಮಣ ಜಾಗದಲ್ಲಿ ವಾಸ ಮಾಡುತ್ತಿರುವ ಕಾರಣ ಇಲ್ಲಿನ ಜನರು ಕನಿಷ್ಠ ಮೂಲಭೂತ ಸೌಕರ್ಯಗಳಿಗೂ ವಂಚನೆಯಾಗುತ್ತ ಬಂದಿರುತ್ತಾರೆ.
ಈಗಾಗಲೇ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರಕ್ಕೆ ಈಗಿರೋ ಜಾಗದಲ್ಲಿ ಸಕ್ರಮ ಮಾಡುವ ಅಥವಾ ಪರ್ಯಾಯ ವ್ಯವಸ್ಥೆ ಮಾಡುವ ಕುರಿತು ಹಲವಾರು ಬಾರಿ ಹೋರಾಟ ಮೂಲಕ ಹಾಗೂ ಮನವಿಗಳನ್ನು ನೀಡುತ್ತ ಬಂದಿರುತ್ತೇವೆ. ಇದು ನಮ್ಮ ಜಾಗ ಎಂದು ಕೆಲವರು ಬಂದು ಇಲ್ಲಿನ ಸ್ಥಳೀಯರ ಜೊತೆ ವಾದಕ್ಕಿಳಿಯುತ್ತಿರುವ ಘಟನೆಗಳು ನಡೆಯುತ್ತಿವೆ. ಆದ್ದರಿಂದ ತಾವು ಕೂಡಲೇ ಈ ಸಮಸ್ಯೆಗೆ ಪರಿಹಾರ ನೀಡಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯೆ ಗಂಗಾ ನಾಯ್ಕ, ಶಾಂತಾ ಇ. ವಾಯ್., ಜಾಫರ್ ಕರ್ಜಗಿ, ಶಂಕರ ವಡ್ಡರ, ಭೀಮ್ಶಾ ವಡ್ಡರ, ರುಸ್ತುಂ ಸಿದ್ಧಿ, ಲಕ್ಷ್ಮಿ ವಡ್ಡರ, ಮಂಜು ಹರಿಜನ, ಶಾಂತಾ ಆಚಾರಿ, ನಾಗರಾಜ್ ವಡ್ಡರ ಹಾಗೂ ಮುಂತಾದ ಸದಸ್ಯರು ಹಾಜರಿದ್ದರು.