ಅಂಕೋಲಾ: ಕಲ್ಲೇಶ್ವರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ 73ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಪ್ರಾಥಮಿಕ ಶಾಲೆಯ ಖ ಆ ಒ ಅ ಅಧ್ಯಕ್ಷ ವಿ.ಎಸ್.ಭಟ್ಟ ಧ್ವಜಾರೋಹಣ ನೆರವೆರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ ಗಣರಾಜ್ಯೋತ್ಸವದ ಸಮಯದಲ್ಲಿ ವಿದ್ಯಾರ್ಥಿಗಳು ಇರಬೇಕಾಗಿತ್ತು. ಕೋರೊನಾ ಕಾರಣದಿಂದಾಗಿ ಅವಕಾಶ ಇಲ್ಲ, ಕೊರೊನಾ ಬೇಗನೆ ದೂರವಾಗಿ ಸಹಜ ಸ್ಥಿತಿಗೆ ಬರುವಂತಾಲಿ ಎಂದು ಹೇಳಿ ಶುಭಾಶಯ ಕೋರಿದರು.
ಪ್ರೌಢಶಾಲೆಯ ಅಧ್ಯಕ್ಷ ಮಹಾಬಲೇಶ್ವರ ಭಟ್ಟ, ಮುಖ್ಯಾಧ್ಯಾಪಕಿ ಪಾರ್ವತಿ ನಾಯಕ, ಪ್ರಾಥಮಿಕ ಶಾಲೆ ಮುಖ್ಯಾದ್ಯಾಪಕ ವಾಮನ ಆಗೇರ, ಡೊಂಗ್ರಿ ಗ್ರಾಮ ಪಂಚಾಯತ ಅಧ್ಯಕ್ಷೆ ಲತಾ ನಾಯ್ಕ, ಉಪಾಧ್ಯಕ್ಷ ವಿನೋದ ಭಟ್ಟ, ಅಭಿವ್ರದ್ಧಿ ಅಧಿಕಾರಿ ಗೀರಿಶ ನಾಯಕ, ಪಂಚಾಯತ ಸದಸ್ಯರಾದ ಮೋಹನ ಪಟಗಾರ, ಹಿರಿಯರಾದ ಜಿ ವಿ ಹೆಗಡೆ, ನಾರಾಯಣ ಹೆಗಡೆ, ಲಲಿತಾ ಕೂರ್ಸೆ, ಅಂಗನವಾಡಿಯ ಸ್ಮಿತಾ ಭಟ್ಟ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಶಿಕ್ಷಕರು, ಪಾಲಕರು ಭಾಗವಹಿಸಿದ್ದರು.