ಹೊನ್ನಾವರ: ಕರುನಾಡ ವಿಜಯ ಸೇನೆಯ ವತಿಯಿಂದ 2022 ರ ಕರ್ನಾಟಕದ ಸಾರ್ವಭೌಮತ್ವವನ್ನು ಸಾರುವ ವಿನೂತನ ದಿನದರ್ಶಿಕೆ ಬಿಡುಗಡೆಗೊಳಿಸಿದರು.
ತಾಲೂಕು ಆಸ್ಪತ್ರೆಯ ಮುಖ್ಯಸ್ಥರಾದ ಡಾಕ್ಟರ್ ರಾಜೇಶ್ ಕಿಣಿ, ತಹಶೀಲ್ದಾರರಾದ ನಾಗರಾಜ ನಾಯ್ಕಡ, ಸಿಪಿಐ ರವರಿಗೆ ಕ್ಯಾಲೆಂಡರ್ ವಿತರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ವಿನಾಯಕ ಆಚಾರಿ, ಜಿಲ್ಲಾ ವಕ್ತಾರರಾದ ಶ್ರೀರಾಮ ಹೊನ್ನಾವರ, ಉಪಾಧ್ಯಕ್ಷರಾದ ಸಂದೇಶ್ ನಾಯ್ಕ, ಯುವ ಘಟಕ ಅಧ್ಯಕ್ಷರಾದ ರಾಘವೇಂದ್ರ ನಾಯ್ಕ, ಉಪಾಧ್ಯಕ್ಷರಾದ ನಿತಿನ್ ಆಚಾರ್ಯ , ಸದಸ್ಯರಾದ ಸಂದೀಪ್ ಮೆಸ್ತ, ಮುನಾಫ್ ಶೇಕ್, ನಿತ್ಯಾನಂದ ಪಾಲೇಕರ್, ಅಂಜನ್ ಆಚಾರಿ ಉಪಸ್ಥಿತರಿದ್ದರು.