• first
    second
    third
    previous arrow
    next arrow
  • ಘನತ್ಯಾಜ್ಯ ವಿಲೇವಾರಿ ಘಟಕ ಯೋಜನೆಯಡಿ ಆಟೋ ಟಿಪ್ಪರ್ ವಾಹನ ಹಸ್ತಾಂತರಿಸಿದ ಸಚಿವ ಹೆಬ್ಬಾರ್

    300x250 AD
    ಆಟೋ ಟಿಪ್ಪರ್ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಸಚಿವ ಶಿವರಾಮ್ ಹೆಬ್ಬಾರ್

    ಯಲ್ಲಾಪುರ: ಇಂದಿನ ದಿನದಲ್ಲಿ ಸ್ವಚ್ಛತೆ ಪಾಲನೆ ಜೊತೆಯಲ್ಲಿ ದಕ್ಷತೆಯ ಆಡಳಿತವೂ ಮುಖ್ಯ. ಈ ನಿಟ್ಟಿನಲ್ಲಿ ಅನುತ್ಪಾದಕ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಸ್ಥಳೀಯ ಸಂಸ್ಥೆಗಳು ಮಾದರಿಯಾಗಿ ಕೆಲಸ ನಿರ್ವಹಿಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
    ಪಟ್ಟಣದ ಪಂಚಾಯತ್ ರಾಜ್ ಇಂಜನೀಯರಿಂಗ್ ಕಛೇರಿಯ ಆವಾರದಲ್ಲಿ ಸೋಮವಾರ ಸ್ವಚ್ಛ ಭಾರತ ಮಿಷನ್ ಯೋಜನೆಯ ಘನತ್ಯಾಜ್ಯ ವಿಲೇವಾರಿ ಘಟಕ ಯೋಜನೆಯಲ್ಲಿ ಆಟೋ ಟಿಪ್ಪರ್ ವಾಹನಗಳನ್ನು ವಿವಿಧ ಪಂಚಾಯತಿಯವರಿಗೆ ಹಸ್ತಾಂತರಿಸಿ ಮಾತನಾಡಿದರು. ಈ ವಾಹನಗಳ ನಿರ್ವಹಣೆಯನ್ನು ಸ್ಥಳೀಯ ಆದಾಯದಲ್ಲಿ ಗ್ರಾಮ ಪಂಚಾಯತಿಯವರೇ ಮಾಡಬೇಕು. ಸರಕಾರದಿಂದ ನಿರ್ವಹಣಾ ವೆಚ್ಚವನ್ನು ನೀಡಲು ಸಾಧ್ಯವಿಲ್ಲ ಎಂದ ಅವರು, ಇಂದು ಎಲ್ಲೆಡೆ ಕಸ ವಿಲೇವಾರಿ ದೊಡ್ಡ ಸವಾಲಾಗಿದ್ದು, ಜನರೇ ಸ್ವಯಂ ಪ್ರೇರಿತರಾಗಿ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕಾಳಜಿ ತೋರಬೇಕು ಎಂದರು.
    ವೇದಿಕೆಯಲ್ಲಿ ಉಪಸ್ಥಿತರಿದ್ದ ಗ್ರಾಮೀಣಾಭಿವೃದ್ಧಿ ಯೋಜನಾ ಸಮೀತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ, ವಾ.ಕ.ರಾ.ಸಾ.ಅಧ್ಯಕ್ಷ ವಿ.ಎಸ್.ಪಾಟೀಲ್ ಮಾತನಾಡಿದರು.
    ಪ್ರಮುಖರಾದ ವಿಜಯ್ ಮಿರಾಶಿ, ಪಂಚಾಯತ್ ರಾಜ್ ಇಂಜನೀಯರಿಂಗ್ ವಿಭಾಗದ ಅಶೋಕ ಬಂಟ್, ಯಲ್ಲಾಪುರ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ್, ಶಿರಸಿ, ಹಳಿಯಾಳ ತಾ.ಪಂ.ಮುಖ್ಯಾಧಿಕಾರಿಗಳು ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top