ಭಟ್ಕಳ: ಕೋಟೇಶ್ವರ ನಗರದಲ್ಲಿರುವ ದಂಡಿನದುರ್ಗಾ ದೇವಸ್ಥಾನಕ್ಕೆ ದುಷ್ಕರ್ಮಿಗಳು ಕಲ್ಲು ಹೊಡೆಯುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕಳೆದ ಒಂದು ವಾರದಿಂದ ದೇವಸ್ತಾನದ ಆವರಣದಲ್ಲಿ ಕಲ್ಲು ಬೀಳತೊಡಗಿದ್ದು ಮಂಗಳವಾರ ದೇವಸ್ತಾನದ ಆಡಳಿತ ಮಂಡಳಿ ಈ ಬಗ್ಗೆ ನಗರ ಠಾಣೆಗೆ ದೂರು ನೀಡಿದ್ದಾರೆ. ಜನವರಿ 22 ರಿಂದ 24 ರವರೆಗೆ ವರ್ಧಂತಿ ಉತ್ಸವ ನಡೆಯುತ್ತಿತ್ತು. 22 ರಂದು ದೇವಸ್ಥಾನದ ಎದುರಿಗೆ ಶಾಮಿಯನ ಹಾಕಲಾಗಿತ್ತು. ಆಗ ದೇವಸ್ತಾನಕ್ಕೆ ದುಷ್ಕರ್ಮಿಗಳು ಕಲ್ಲು ಎಸೆಯಲು ಆರಂಭಿಸಿದ್ದರು. ಮೊದಲ ದಿನ ಆಡಳಿತ ಮಂಡಳಿಯ ಸದಸ್ಯರು ಅದನ್ನು ಗಂಭಿರವಾಗಿ ಪರಿಗಣಿಸಲಿಲ್ಲ.
ಜನವರಿ 25 ರಂದು ಮತ್ತೆ ಕಲ್ಲು ಎತ್ತರದ ಪ್ರದೇಶದಿಂದ ತೂರಿ ಬಂದ ಕಲ್ಲು ದೇವಸ್ತಾನದ ಆವರಣದಲ್ಲಿ ದೇವಸ್ತಾನದ ಅಧ್ಯಕ್ಷರಾದ ಮೋಹನ ಶಿರಾಲಿಕರ ಇವರ ಕಾಲಿಗೆ ತಾಗಿದೆ. ಈ ಬಗ್ಗೆ ನಗರ ಠಾಣೆಗೆ ದೂರು ನೀಡಲಾಗಿದ್ದು, ನಗರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ. ದೇವಸ್ತಾನದ ಸುತ್ತಮುತ್ತಲೂ ಅನ್ಯ ಕೋಮಿನವರು ಹೆಚ್ಚಾಗಿ ವಾಸವಾಗಿದ್ದು ಇದರಿಂದ ಭಟ್ಕಳದಲ್ಲಿ ಮತ್ತೆ ಆತಂಕ ಹುಟ್ಟಿಸುವಂತೆ ಮಾಡಿದೆ. ಸದ್ಯ ದೇವಸ್ಥಾನಕ್ಕೆ ಪೊಲೀಸರನ್ನು ನಿಯೋಜನೆಗೊಳಿಸಲಾಗಿದೆ.