ಅಂಕೋಲಾ: ಆಜಾದಿ ಕಾ ಅಮೃತ ಮಹೋತ್ಸವದ ನಿಮಿತ್ತ ಪಟ್ಟಣದ ಕೆ.ಎಲ್.ಇ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಧಾರವಾಡದ ಪ್ರಾದೇಶಿಕ ಪತ್ರಾಗಾರ ಇಲಾಖೆ ವತಿಯಿಂದ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕೀರಣ ಹಾಗೂ ಐತಿಹಾಸಿಕ ದಾಖಲೆಗಳ ಪ್ರದರ್ಶನವನ್ನು ಜ.28 ರಂದು ಬೆಳಿಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ.
ಪದ್ಮಶ್ರೀ ತುಳಸಿ ಗೌಡ ಹೊನ್ನಳ್ಳಿ ಉದ್ಘಾಟಿಸುವರು. ಕೆ.ಎಲ್.ಇ. ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಡಾ. ದಿನೇಶ ಎಲ್. ಭಟ್ಕಳ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಬೆಂಗಳೂರು ಪತ್ರಾಗಾರ ನಿರ್ದೇಶನಾಲಯದ ನಿರ್ದೇಶಕ ಡಾ. ಗವಿಸಿದ್ದಯ್ಯ ಗೋವಾ ಇಂಡೋ ಪೋರ್ಚುಗೀಸ್ ಲಿಟರರಿ ಫೌಂಡೇಷನ್ ನಿರ್ದೇಶಕ ಡಾ. ಅರವಿಂದ ವಿ. ಯಾಳಗಿ, ಧಾರವಾಡ ಪ್ರಾದೇಶಿಕ ಪತ್ರಾಗಾರ ಹಿರಿಯ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ, ಕೆ.ಎಲ್.ಇ ಸಮೂಹ ಸಂಸ್ಥೆಗಳ ಸಂಯೋಜಕ ಆರ್. ನಟರಾಜ, ಸದಸ್ಯೆ ಡಾ. ಮಿನಲ್ ನಾರ್ವೇಕರ ಪಾಲ್ಗೊಳ್ಳುವರು. ಮೂರು ಗೋಷ್ಠಿಗಳು ಮತ್ತು ಪ್ರಮಾಣಪತ್ರ ವಿತರಣೆ ನಡೆಯಲಿದೆ ಎಂದು ಕೆ.ಎಲ್.ಇ. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವಿನಾಯಕ ಜಿ ಹೆಗಡೆ ತಿಳಿಸಿದ್ದಾರೆ.