ಶಿರಸಿ: ಸಚಿವ ಶಿವರಾಮ ಹೆಬ್ಬಾರ ಸಮ್ಮುಖದಲ್ಲಿ ಕಾತೂರ ಗ್ರಾಮ ಪಂಚಾಯತ ಮಾಜಿ ಉಪಾಧ್ಯಕ್ಷರು ಹಾಗೂ ಕುರುಬರ ಸಮಾಜದ ಹಿರಿಯ ಮುಖಂಡರಾದ ವಸಂತ ಫಕೀರಪ್ಪ ಯಲ್ಲಾಪುರ ನೇತೃತ್ವದಲ್ಲಿ ಅನೇಕರು ಕಾಂಗ್ರೇಸ್ ತೊರೆದು ಯಲ್ಲಾಪುರದಲ್ಲಿ ಬಿಜೆ.ಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಕಾಂಗ್ರೇಸಿನ ಕುರುಬರ ಸಮಾಜದ ಮುಖಂಡ ವಸಂತ ಯಲ್ಲಾಪುರ, ಯನುಮಂತ ಯಲ್ಲಾಪುರ ಇವರ ಮುಂದಾಳತ್ವದಲ್ಲಿ ಕಾಂಗ್ರೇಸ ಕಾರ್ಯಕರ್ತರು ಬಿ.ಜೆ.ಪಿ ಸೇರ್ಪಡೆಗೊಂಡರು. ಸದ್ಯದಲ್ಲೆ ಕಾತೂರು ಗ್ರಾಮ ಪಂಚಾಯತ ವ್ಯಾಪ್ತಿಯ ಇನ್ನೂ ನೂರಾರು ಕುರುಬರ ಸಮಾಜದ ಕಾಂಗ್ರೆಸ್ ಪಕ್ಷದಲ್ಲಿ ಇರುವ ಮುಖಂಡರು, ಕಾರ್ಯಕರ್ತರು, ಹಾಗೂ ಹನುಮಾಪುರ (ನಾಗನೂರು) ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿನ ಭೋವಿ (ವಡ್ಡರ) ಸಮಾಜದ ಕಾಂಗ್ರೇಸ್ ಪಕ್ಷದಲ್ಲಿರುವ ಮುಖಂಡರುಗಳು, ಕಾರ್ಯಕರ್ತರುಗಳು ಬಿ.ಜೆ.ಪಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಜಿಲ್ಲಾ ಬಿ.ಜೆ.ಪಿ ಎಸ್.ಸಿ. ಮೋರ್ಚಾದ ಜಿಲ್ಲಾ ಉಪಾಧ್ಯಕ್ಷರಾದ ತಿರುಪತಿ ಜನಗೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.