ಸಿದ್ದಾಪುರ: ಇಲ್ಲಿನ ಉಪ ವಿಭಾಗದ ಕಾನಸೂರು, ಹಾರ್ಸಿಕಟ್ಟಾ, ಹೇರೂರು ಫೀಡರ್ ವ್ಯಾಪ್ತಿಯಲ್ಲಿ ಕೆ.ಪಿ.ಟಿ.ಸಿ.ಎಲ್’ ಕಾಮಗಾರಿ ಕೈಗೊಳ್ಳುವುದರಿಂದ ಜ.29 ರ ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಸಿದ್ದಾಪುರ ಉಪ ವಿಭಾಗದ ಕಾನಸೂರು, ತ್ಯಾಗಲಿ, ಕಾನಗೋಡು, ಕೋಲಸಿರ್ಸಿ, ಬಿದ್ರಕಾನ್ ಹಾಸಿಕಟ್ಟಾ, ಹೆಗ್ಗರಣಿ, ನಿಲ್ಕುಂದ ಪಂಚಾಯತಿಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಕಾರಣ ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ಕಾರ್ಯ ಮತ್ತು ಪಾಲನಾ ಯುಪಿಎ ವಿಭಾಗ ಸಿದ್ದಾಪುರ ಹೆಸ್ಕಾಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.