ಶಿರಸಿ: ದಿ ಅಗ್ರಿಕಲ್ಚರಲ್ ಸರ್ವಿಸ್ ಎಂಡ್ ಡೆವಲಪ್ಮೆಂಟ್ ಕೋ-ಆಪ್ ಸೊಸೈಟಿ ಲಿ. ಶಿರಸಿ ವತಿಯಿಂದ “ಸಸ್ಯ ಆರೈಕೆ” ಶೀರ್ಷಿಕೆಯಡಿಯಲ್ಲಿ ತೋಟ ನಿರ್ವಹಣೆ ಕೈಪಿಡಿ ಬಿಡುಗಡೆ ಸಮಾರಂಭವನ್ನು ಜ.28 ರ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಸಂಘದ ಕಚೇರಿಯಲ್ಲಿ ಆಯೋಜಿಸಲಾಗಿದೆ.
ಚೀಪ್ ಮಾರ್ಕೆಟಿಂಗ್ ಮ್ಯಾನೇಜರ್, ಕರ್ನಾಟಕ ಅಗ್ರೋ ಕೆಮಿಕಲ್ಸ್ ಬೆಂಗಳೂರಿನ ಡಾ.ಎಂ ನಾರಾಯಣಸ್ವಾಮಿ ಕೈಪಿಡಿ ಬಿಡುಗಡೆ ಮಾಡಲಿದ್ದಾರೆ. ಅಗ್ರಿಕಲ್ಚರಲ್ ಸರ್ವಿಸ್ ಅಂಡ್ ಡೆವಲಪ್ಮೆಂಟ್ ಕೋ -ಆಪ್ ಸೊಸೈಟಿಯ ಅಧ್ಯಕ್ಷ ಭಾಸ್ಕರ್ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.