ಶಿರಸಿ: ಸಿದ್ಧಿವಿನಾಯಕ ಪ್ರೌಢಶಾಲೆ ಗೋಳಿಯಲ್ಲಿ 73ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಸಿದ್ಧಿವಿನಾಯಕ ವಿದ್ಯಾಪ್ರಸಾರ ಸಮಿತಿಯ ಅಧ್ಯಕ್ಷರಾದ ಮಂಜುನಾಥ ಎಲ್ ಹೆಗಡೆ ಹಲಸಿಗೆ ಇವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶಿವಾನಂದ ಹೆಗಡೆ ಉಗ್ರೆಸರ, ಕೋಶಾಧ್ಯಕ್ಷರಾದ ರಮೇಶ್ ಭಟ್ಟ ಅಬ್ಬಿಹದ್ದ, ಸದಸ್ಯರಾದ ಮಹೇಶ ಭಟ್ಟ ನಾಡಗುಳಿ,ಸಿ ಎಸ್ ಹೆಗಡೆ ನೇರಲಹದ್ದ , ಗಜಾನನ ಹೆಗಡೆ ದೊಡ್ಮನೆ ಹಾಜರಿದ್ದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ದಾನಿಗಳು ಸ್ಥಾಪಿಸಿದ ದತ್ತಿನಿಧಿ ಬಹುಮಾನಗಳನ್ನು ಶೈಕ್ಷಣಿಕವಾಗಿ ಸಾಧನೆ ಮಾಡಿದ 2020-21ನೇ ಸಾಲಿನ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಹಾಗೆಯೇ ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೂ ಸಹ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯಾಧ್ಯಾಪಕರಾದ ಎಂ ಜಿ ಹೆಗಡೆ ಹಾಗೂ ಇತರ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಹಾಜರಿದ್ದರು.
ಕಾರ್ಯಕ್ರಮವನ್ನು ಹಿರಿಯ ಶಿಕ್ಷಕರಾದ ನಾರಾಯಣ ದೈಮನೆ ನಿರ್ವಹಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಗಣೇಶ್ ಜಿ ಹೆಗಡೆ ಇವರು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು, ಆರ್ ಕೆ ಚವ್ಹಾಣ್ ವಂದಿಸಿದರು.