• Slide
    Slide
    Slide
    previous arrow
    next arrow
  • ಮುಂಡಗೋಡನ 91ವಿದ್ಯಾರ್ಥಿಗಳಲ್ಲಿ ಪತ್ತೆಯಾದ ಸೋಂಕು

    300x250 AD

    ಮುಂಡಗೋಡ: ಶಾಲಾ ಮಕ್ಕಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ತಗುಲಿತ್ತಿದ್ದು ತಾಲೂಕಿನಲ್ಲಿ ಬುಧವಾರ ಒಂದೆ ದಿನ 91 ಶಾಲಾ ಮಕ್ಕಳಿಗೆ ಅದರಂತೆ 144 ಜನರಲ್ಲಿ ಕೊವೀಡ್ ಸೋಂಕು ಪತ್ತೆಯಾಗಿದೆ. ಇನ್ನಾದರು ತಾಲೂಕಾಡಳಿತ ತಾಲೂಕಿನಲ್ಲಿ ನಡೆಯುವ ಸಭೆ ಸಮಾರಂಭ, ಮದುವೆ, ಜಾತ್ರೆಗಳು ಹಾಗೂ ದನ ಓಡಿಸುವಂತ ಕಾರ್ಯಕ್ರಮಗಳು ನಡೆಯದಂತೆ ಹಾಗೂ ಸಾರ್ವಜನಿಕರಲ್ಲಿ ಸೋಂಕಿನ ಬಗ್ಗೆ ಜಾಗ್ರತೆ ಮೂಡಿಸುವ ಕೆಲಸ ಮಾಡಲು ಮುಂದಾಗಬೇಕಿದೆ.

    ಲೊಯೋಲ ಪಿಯು ಕಾಲೇಜಿನಲ್ಲಿ 17, ಲೊಯೋಲ ಕೇಂದ್ರಿಯ ವಿದ್ಯಾಲಯದ 10 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ತಗುಲಿದೆ. ಅದರಂತೆ ಎಮ್.ಡಿ.ಆರ್.ಎಸ್ ಕರಗಿನಕೊಪ್ಪದಲ್ಲಿ 8, ತಾಲೂಕಿನ ಪಾಳಾ ಸರ್ಕಾರಿ ಉರ್ದು 8., ಬಡ್ಡಿ ಜಿ.ಎಚ್ಪಿ.ಎಸ್ 15.,ಕಾತೂರಿನ ಜಿಎಚ್.ಸ್‍ನಲ್ಲಿ 26, ಹಾಗೂ ಮಳಗಿಯ ಜವಾಹಾರ ನವೋದಯಾ ಪಂಚವಟ್ಟಿ ಶಾಲೆಯಲ್ಲಿ 7 ವಿದ್ಯಾರ್ಥಿಯಲ್ಲಿ ಒಟ್ಟು ಸೇರಿ ಸುಮಾರು 91 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಬಂದಿದೆ.

    ಇನ್ನೂಳಿದಂತೆ ಮುಂಡಗೋಡ ಪಟ್ಟಣ, ಸಾಲಗಾಂವ, ಟಿಬೆಟಿಯನ್ ಕ್ಯಾಂಪ್. ಚಿಗಳ್ಳಿ, ನಂದಿಗಟ್ಟಾ, ಕಾವಲಕೊಪ್ಪ ಅಗಡಿ, ಕೂರ್ಲಿ, ಸೇರಿದಂತೆ ಹೀಗೆ ಒಟ್ಟು 144 ಜನರಿಗೆ ಕೋವಿಡ್ ಸೊಂಕು ತಗುಲಿದೆ. ಬುಧವಾರ ಒಂದೇ ದಿನ ಕೋವಿಡ್ ಸೊಂಕು ಶತಕ ದಾಟಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಅದರಲ್ಲಿಯೂ ತಾಲೂಕಿನ ಶಾಲಾ ಮಕ್ಕಳಲ್ಲಿ ಕೋವಿಡ್ ಸೋಂಕು ಹೆಚ್ಚು ಕಾಣೆಸಿಕೊಂಡಿದ್ದು ಇದರಿಂದ ಮಕ್ಕಳ ಪಾಲಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೆಟು ಹಾಕುತ್ತಿದ್ದಾರೆ.

    300x250 AD

    ಶ್ರೀಧರ ಮುಂದಲಮನಿ ತಹಶೀಲ್ದಾರ, ತಾಲೂಕಿನಲ್ಲಿ ಕೋವಿಡ್ ಟೆಸ್ಟ್ ಗಳನ್ನು ಶಾಲಾ ಕಾಲೇಜಗಳಲ್ಲಿ ಮಾಡುತ್ತಿರುವುದ್ದರಿಂದ ಕೋವಿಡ್ ಪ್ರಕರಣ ಹೆಚ್ಚು ಬರುತ್ತಿದೆ. ಒಂದೇ ದಿನ 144 ಜನರಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಯಾರು ಭಯಪಡುವ ಅಗತ್ಯವಿಲ್ಲ. ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡವರಿಗೆ ಯಾವ ಕೋವಿಡ್ ಯಾವ ಲಕ್ಷಣಗಳು ಇಲ್ಲ ಮತ್ತು ಆಸ್ಪತ್ರೆಗೆ ಸೇರಿಸುವ ಹಾಗೆ ಯಾರು ಇಲ್ಲ. ಯಾವ ಶಾಲೆಗಳಲ್ಲಿ 5 ಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾದರೆ ಅಂತಹ ಶಾಲೆಗಳನ್ನು ಎಸಿ ಅವರ ಆದೇಶದ ಮೇರೆಗೆ ಒಂದು ವಾರ ರಜೆ ಘೋಷಣೆ ಮಾಡುತ್ತಿದ್ದೇವೆ ಹಾಗೂ ಅಂತಹ ಶಾಲೆಯ ಶಿಕ್ಷಕರಿಗೆ ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ಕೋವಿಡ್ ತಪಾಸಣೆ ಮಾಡುತ್ತೇವೆ. ಈಗಾಗಲೇ ಎಲ್ಲರೂ ಲಸಿಕೆಗಳನ್ನು ಪಡೆದಿರುವುದರಿಂದ ಹೆಚ್ಚು ಪರಿಣಾಮ ಬೀರುವುದಿಲ್ಲ. ಮತ್ತು ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳಗೆ ಜಾಗೃತಿ ಮೂಡಿಸಲು ಶಾಲೆಯ ಶಿಕ್ಷಕರಿಗೆ ಸೂಚಿಸಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top