ಕುಮಟಾ : ಕಲಾಗಂಗೋತ್ರಿ (ರಿ.) ಕುಮಟಾ, ಯಕ್ಷರಂಗ ಪತ್ರಿಕಾ ಬಳಗ ಹಳದೀಪುರ, ಹವ್ಯಕ ವಿದ್ಯಾವರ್ಧಕ ಸಂಘ ಕುಮಟಾ ಇದರ ಸಂಯುಕ್ತ ಸಂಯೋಜನೆಯಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ಜಿ.ಎಲ್ ಹೆಗಡೆಯವರಿಗೆ ಅಭಿನಂದನಾ ಕಾರ್ಯಕ್ರಮ ಮತ್ತು ನಾಗರಿಕ ಸನ್ಮಾನ ಕಾರ್ಯಕ್ರಮವನ್ನು ಜ.29 ರ ಶನಿವಾರ ಸಂಜೆ 4.30 ರಿಂದ ತಾಲೂಕಿನ ಮೂರೂರು ರಸ್ತೆಯಲ್ಲಿರುವ ಹವ್ಯಕ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಕೆ. ಶೆಟ್ಟಿ ಇವರು ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಖ್ಯಾತ ಉದ್ಯಮಿಗಳಾದ ಮುರಳೀಧರ ಪ್ರಭು, ಹೆರವಟ್ಟಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪ್ರಜಾವಾಣಿ ಪತ್ರಿಕೆಯ ಪ್ರಧಾನ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ಟ ಐನಕೈ ದಿಕ್ಸೂಚಿ ಭಾಷಣ ಮಾಡಲಿದ್ದು, ಸೆಲ್ಕೋ ಸೋಲಾರ್ ನ ಸಿ.ಇ.ಓ ಮೋಹನ ಭಾಸ್ಕರ ಹೆಗಡೆ ಶುಭಾಶಂಸನೆ ಗೈಯಲ್ಲಿದ್ದಾರೆ.
ಯಕ್ಷಗಾನ ಅಕಾಡಮಿಯ ನಿಕಟಪೂರ್ವ ಅಧ್ಯಕ್ಷರಾಗಿದ್ದ ದಿ. ಪ್ರೋ. ಎಂ.ಎ ಹೆಗಡೆಯವರ ಸಾಹಿತ್ಯ ನಿರ್ದೇಶನದ “ಪಂಚ ಪಾವನ ಕಥಾ” ಯಕ್ಷ ನೃತ್ಯ ರೂಪಕ ಕು. ತುಳಸಿ ಹೆಗಡೆ ಶಿರಸಿ ಇವರಿಂದ ಪ್ರಸ್ತುತಗೊಳ್ಳಲಿದೆ. ಭಾಗವತರಾಗಿ ಶ್ರೀ ಕೊಳಗಿ ಕೇಶವ ಹೆಗಡೆ, ಮದ್ದಳೆಯಲ್ಲಿ ಶ್ರೀ ಶಂಕರ ಭಾಗವತ ಯಲ್ಲಾಪುರ, ಚಂಡೆಯಲ್ಲಿ ವಿಘ್ನೇಶ್ವರ ಗೌಡ ಕೆಸ್ರಕೊಪ್ಪ ಸಹಕಾರ ನೀಡಲಿದ್ದಾರೆ.
ಈ ಎಲ್ಲ ಕಾರ್ಯಕ್ರಮಕ್ಕೆ ಎಲ್ಲ ಕಲಾಸಕ್ತರು, ಡಾ. ಜಿ.ಎಲ್ ಹೆಗಡೆ ಅವರ ಅಭಿಮಾನಿಗಳು ಹಾಗೂ ಹಾಗೂ ಸಾರ್ವಜನಿಕರು ಹಾಜರಿದ್ದು ಕಾರ್ಯಕ್ರಮ ಚಂದಗಾಣಿಸುವಂತೆ ಮೋಹನ ಹೆಗಡೆ ಹೆರವಟ್ಟಾ, ಶ್ರೀಕಾಂತ ಭಟ್ಟ, ವಸಂತ ಭಟ್ಟ,ಮಂಜುನಾಥ ಶೇಟ್, ಜೆ.ಜಿ ನಾಯ್ಕ ಹಾಗೂ ಇತರ ಸಂಘಟಕರು ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.