• Slide
    Slide
    Slide
    previous arrow
    next arrow
  • ಮೂರು ತಿಂಗಳ ನಂತರ ಶಿರಸಿಯಲ್ಲಿ ‘0’; ಯಲ್ಲಾಪುರ-ಸಿದ್ದಾಪುರದಲ್ಲೂ ‘ಸೊನ್ನೆ’ ಸುತ್ತಿದ ಕೊರೊನಾ

    300x250 AD

    ಯಲ್ಲಾಪುರ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಸಂಖ್ಯೆ ಇಳಿಕೆಯಾಗುತ್ತಿರುವುದು ಸ್ಪಷ್ಟವಾಗಿ ತಿಳಿದು ಬರುತ್ತಿದ್ದು, ಇಂದು ಯಲ್ಲಾಪುರ, ಸಿದ್ದಾಪುರ, ಶಿರಸಿ ತಾಲೂಕಿನಲ್ಲಿ ಒಂದೇ ಒಂದು ಕೊರೊನಾ ಕೇಸ್ ಕೂಡಾ ಪತ್ತೆಯಾಗಿಲ್ಲ.
    ಲಾಕ್ಡೌನ್ ತೆರವಾದಾಗಿನಿಂದ ಗ್ರಾಮೀಣ ಭಾಗದ ಜನತೆ ನಗರ ಪ್ರದೇಶಗಳಿಗೆ ಕೆಲಸ-ಕಾರ್ಯದ ನಿಮಿತ್ತ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ನಗರದ ಪ್ರಮುಖ ರಸ್ತೆ, ಅಂಗಡಿ-ಮುಂಗಟ್ಟುಗಳಲ್ಲಿ ಜನಜಂಗುಳಿಯಿಂದ ತುಂಬಿತ್ತು. ಮತ್ತೆಲ್ಲಿ ಕೊರೊನಾ 3ನೇ ಪ್ರಾರಂಭವಾಗುವುದೋ ಎಂಬ ಭಯದಲ್ಲಿದ್ದರು. ಆದರೆ ಖುಷಿಯ ಸಂಗತಿಯೆಂದರೆ ಈ ಮೂರು ತಾಲೂಕಿನಲ್ಲಿ ಒಂದೇ ಒಂದು ಕೊರೊನಾ ಕೇಸ್ ಕೂಡಾ ಪತ್ತೆಯಾಗಿಲ್ಲ. ಶಿರಸಿಯಲ್ಲಿ ಏಪ್ರಿಲ್ 12 ರಂದು 0 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಮತ್ತೆ ಮೂರು ತಿಂಗಳ ನಂತರದಲ್ಲಿ ಜಿರೋ ಕೇಸ್ ಪತ್ತೆಯಾಗಿದೆ. ಯಲ್ಲಾಪುರದಲ್ಲಿ ಒಟ್ಟೂ 3855 ಕೇಸ್ ಪತ್ತೆಯಾಗಿದ್ದು, 3776 ಮಂದಿ ಗುಣಮುಖರಾಗಿ ಸದ್ಯ 45 ಕೇಸ್ ಸಕ್ರಿಯವಾಗಿದೆ. ಸಿದ್ದಾಪುರದಲ್ಲಿ ಒಟ್ಟೂ 4200 ಕೇಸ್ ಪತ್ತೆಯಾಗಿದ್ದು, ಸದ್ಯ 3 ಕೇಸ್ ಸಕ್ರಿಯವಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top