• Slide
  Slide
  Slide
  previous arrow
  next arrow
 • ಒಗ್ಗೂಡಿ ಸತತ ಪರಿಶ್ರಮದಿಂದ ದೇಶವನ್ನು ಪ್ರಗತಿ ಪಥದತ್ತ ಕೊಂಡೊಯ್ಯಬೇಕು;ಎಸ್ ಡಿ ಕುಲಕರ್ಣಿ

  300x250 AD

  ಹಳಿಯಾಳ: ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯ, ಹಳಿಯಾಳದಲ್ಲಿ ಜನವರಿ 26 ರಂದು 73 ನೇ ಗಣರಾಜ್ಯೋತ್ಸವ ದಿನವನ್ನು ವಿದ್ಯುಕ್ತವಾಗಿ ಆಚರಿಸಲಾಯಿತು.

  ಬೆಳಿಗ್ಗೆ 8 ಗಂಟೆಗೆ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಧ್ವಜಾರೋಹಣ ಸಮಾರಂಭದಲ್ಲಿ ಮಹಾವಿದ್ಯಾಲಯದ ಹಿರಿಯ ಉಪನ್ಯಾಸಕರಾದ ಎಸ್ ಡಿ ಕುಲಕರ್ಣಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತ ನಾವೆಲ್ಲರೂ ಒಗ್ಗೂಡಿ ಸತತ ಪರಿಶ್ರಮದಿಂದ ದೇಶವನ್ನು ಪ್ರಗತಿಯ ಪಥದಲ್ಲಿ ಕೊಂಡೊಯ್ಯಬೇಕೆಂದು ಕರೆ ನೀಡಿದರು.

  ಪ್ರಾಂಶುಪಾಲರಾದ ಡಾ. ವಿ ಎ ಕುಲಕರ್ಣಿ ಅವರು ಈ ಸಂದರ್ಭದಲ್ಲಿ ಮಾತನಾಡುತ್ತ ಭಾರತ ಸಂವಿಧಾನದ ರಚನಾಕಾರರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಗಳನ್ನು ಸ್ಮರಿಸಿದರು. ಸಂವಿಧಾನ ಜಾರಿಗೆ ಬಂದ ಈ ದಿನದಂದು ನಾವು ಸಂವಿಧಾನದ ಮೂಲ ಉದ್ದೇಶಗಳನ್ನು ತಿಳಿದುಕೊಂಡು ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಬೇಕೆಂದು ನುಡಿದರು.

  300x250 AD

  ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ ನಡೆಸಿದ ಭಾಷಣ ಸ್ಪರ್ಧೆಯ ವಿಜೇತರಾದ ವಿಠ್ಠಲ್ ಗುನಗಾ, ದೇವರಾಜ ತೆಗ್ಗಿ, ಸಿಮ್ರನ್ ಮುಲ್ಲಾ, ಭಿತ್ತಿ ಚಿತ್ರ ಸ್ಪರ್ಧೆ ವಿಜೇತರಾದ ಭುವನೇಶ್ವರಿ ಬಿ, ಸಂಜನಾ ಎಸ್, ಐಶ್ವರ್ಯಾ ಎಮ್, ರೋಹಿಣಿ ಪಾಟೀಲ್, ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಾದ ಅಂಕಿತಾ ಜಿ, ಸಾಕ್ಷಿ ತೋರ್ಗಲ್ಮಠ್, ಅನಿತಾ ಮಡಿವಾಳರ್, ಚಿತ್ರ ಕಲೆ ಸ್ಪರ್ಧೆಯ ವಿಜೇತರಾದ ಶಿವಾಂಗಿನಿ ಕುಂಬಾರ್, ಮೈತ್ರಿ ಸಿಂದಗಿ, ದೀಪಶ್ರೀ, ಭಾಷಣ ಸ್ಪರ್ಧೆ ವಿಜೇತರಾದ ಜೆನ್ನಿಫರ್, ಪ್ರಿಯಾ ಪೂಜಾರಿ, ಶಕ್ತಿ ಸಂರಕ್ಷಣೆ ಕುರಿತ ರಸಪ್ರಶ್ನೆ ಸ್ಪರ್ಧೆ ವಿಜೇತರಾದ ವೇದಾಂತ ಶರ್ಮಾ, ಸೌರಭ್ ಶೇಟ್, ವಿನಾಯಕ ನಲವಾಡಿ, ವಿಜಯ್ ಮೂಕಣ್ಣವರ್, ಮಂಜುನಾಥ ಹೆಗಡೆ ಮತ್ತು ವಿನಾಯಕ ಎಚ್ ಅವರುಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಮಹೇಂದ್ರ ದೀಕ್ಷಿತ್, ವಿದ್ಯಾರ್ಥಿಗಳಾದ ವಿಠ್ಠಲ್ ಗುನಗಾ ಮತ್ತು ಶ್ರೇಯಾ ಪೈ ದೇಶಭಕ್ತಿ ಗೀತೆಗಳನ್ನು ಹಾಡಿದರು.

  ವಿದ್ಯಾರ್ಥಿನಿಯರಾದ ಸನಾ ನಾಯಕ್ ಮತ್ತು ಪ್ರಿಯಾ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಆಡಳಿತ ವಿಭಾಗ ಮುಖ್ಯಸ್ಥರಾದ ಪೆÇ್ರ. ಮಂಜುನಾಥ ಡಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ. ಗದಿಗೆಪ್ಪಾ ಯಳ್ಳೂರ್, ಎಲ್ಲ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top