ಮುಂಡಗೋಡ: ತಾಲೂಕಿನ ಕಾತೂರ ಗ್ರಾಮದಲ್ಲಿ ಲಗ್ನ ಪತ್ರಿಕೆ ನೀಡುವ ನೆಪದಲ್ಲಿ ಮಹಿಳೆಯೊಬ್ಬಳೆ ಇದ್ದ ಮನೆಗೆ ನುಗ್ಗಿ ಆಕೆಯ ಕುತ್ತಿಗೆಗೆ ಚಾಕು ಹಿಡಿದು ಬೆದರಿಸಿ ಬಂಗಾರದ ಆಭರಣ ಹಾಗೂ ನಗದು ದೋಚಿಕೊಂಡು ಹೋಗಿದ್ದ ಅಂತರ ಜಿಲ್ಲಾ ಕಳ್ಳತನದ ಆರೋಪಿತನನ್ನು ಪೊಲೀಸರು ಬಂಧಿಸಿದ್ದಾರೆ.
ಹಾನಗಲ್ಲ ತಾಲೂಕಿನ ಚಿಕ್ಕೇರಿ ಹೊಸಳ್ಳಿ ಗ್ರಾಮದ ಹನುಮಂತ ಯಲಿವಾಳ ಎಂಬಾತನೇ ಬಂಧಿತ ಆರೋಪಿತನಾಗಿದ್ದಾನೆ. ಜ.17ರ ರಾತ್ರಿ ಕಾತೂರ ಗ್ರಾಮದ ಗೀತಾ ಯಲ್ಲಾಪುರ(54) ಎಂಬುವರ ಮನೆಗೆ ಆರೋಪಿತ ಹನುಮಂತ ಲಗ್ನ ಪತ್ರಿಕೆ ಕೊಡಲು ಬಂದಿರುವುದಾಗಿ ತಿಳಿಸಿ ಮನೆಯ ಒಳಗೆ ಬಂದು ಕುಡಿಯಲು ನೀರು ಕೇಳಿ ಒಂದು ಗ್ಲಾಸ್ ನೀರು ಕುಡಿದು ಮತ್ತೊಂದು ಗ್ಲಾಸ್ ನೀರು ನೀಡುವಂತೆ ಹೇಳಿ ಗೀತಾ ಅವರ ಮೃತ ಪುತ್ರನ ಪೋಟೋ ನೋಡುತ್ತ ಕಣ್ಣಿರು ಹಾಕುತ್ತ ನಾಟಕ ಮಾಡಿ ಹಿಂದಿನಿಂದ ಬಂದು ಚಾಕುವಿನಿಂದ ಕುತ್ತಿಗೆಗೆ ಹಿಡಿದು ಬೆದರಿಸಿ ಹಲ್ಲೆ ನಡೆಸಿ ಕೊರಳಲ್ಲಿದ್ದ 20 ಗ್ರಾಂ ತೂಕದ ಬಂಗಾರದ ಲಕ್ಷ್ಮೀ ಪದಕದ ಸರ, 12ಗ್ರಾಂನ ಎರಡು ಉಂಗುರ, ಹಾಗೂ ಹತ್ತು ಸಾವಿರ ರೂ ನಗದು ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದನು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಪಿಐ ಎಸ್.ಎಸ್ ಸಿಮಾನಿಯವರ ನೇತೃತ್ವದ ತಂಡ ತನಿಖೆ ನಡೆಸಿ ಆರೋಪಿತನನ್ನು ಬಂಧಿಸಿದ್ದಾರೆ. ಹಣ ಹಾಗೂ ಚಿನ್ನದ ಸರವನ್ನು ಬಂಧಿತ ಆರೋಪಿತನಿಂದ ವಶಕ್ಕೆ ಪಡೆದಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸುಮನ್ ಪನ್ನೇಕರ್, ಹೆಚ್ಚುವರಿ ಎಸ್.ಪಿ ಎಸ್.ಬದರಿನಾಥ, ಶಿರಸಿ ಡಿವೈಎಸ್ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ ಸಿದ್ದಪ್ಪ ಸಿಮಾನಿ, ಪಿ.ಎಸ್.ಐಗಳಾದ ಬಸವರಾಜ ಮಬನೂರ, ನಿಂಗಪ್ಪ ಜಕ್ಕಣ್ಣವರ್, ಪ್ರೊಬೆಷನರಿ ಪಿಎಸೈ ಮಲ್ಲಿಕಾರ್ಜುನ, ಎಎಸೈ ಮಣಿಮಾಲನ್, ಸಿಬ್ಬಂದಿಗಳಾದ ಧರ್ಮರಾಜ, ಗಣಪತಿ, ವಿನೋದಕುಮಾರ, ಅಣ್ಣಪ್ಪÀ, ತಿರುಪತಿ, ಪೊಲೀಸ ಠಾಣೆ ಹಾಗೂ ಕಾರವಾರದ ಟೇಕ್ನಿಕಲ ಸಿಬ್ಬಂದಿ ಸುಧೀರ ಮಡಿವಾಳರ ಸೇರಿದಂತೆ ಇತರರು ಕಾರ್ಯಾಚರಣೆಯಲ್ಲಿದ್ದರು.